ಶ್ರೀಲಂಕಾ ಸಮುದ್ರದಲ್ಲಿ ಭಾರತಕ್ಕೆ ಸೇರಿದ ಇಂಧನ ಟ್ಯಾಂಕರ್ ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಅಪಾಯಕ್ಕೆ ಸಿಲುಕಿದ್ದ 22 ಮಂದಿ ಸಿಬ್ಬಂದಿಗಳನ್ನು ಭಾರತೀಯ ನೌಕಾಪಡೆಯ ಎನ್‌ಎಸ್‌ಎಸ್ ಸಹ್ಯಾದ್ರಿ ರಕ್ಷಣೆ ಮಾಡಿದೆ.
ಶ್ರೀಲಂಕಾದ ಸಮುದ್ರದ ದಂಡೆಯಲ್ಲಿ ಇಂಧನ ಸಾಗಿಸುತ್ತಿದ್ದ ವೇಳೆ ಎಂಟಿ ನ್ಯೂ ಡೈಮಂಡ್ ಎಂಬ ಹಡಗಿನ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು. ಈ ದುರ್ಘಟನೆಯಲ್ಲಿ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದರು. ಇತರ 22 ಮಂದಿ ಸಿಬ್ಬಂದಿಗಳನ್ನು ಭಾರತೀಯ ನೌಕಾಪಡೆ ಎನ್‌ಎನ್‌ಎಸ್ ಸಹ್ಯಾದ್ರಿ ಮೂಲಕ ಬೆಂಕಿ ನಂದಿಸುವ ರಕ್ಷಣೆ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ನೌಕಾಪಡೆಯ ವಕ್ತಾರರು ಪ್ರಸ್ತುತ ಇಂಧನ ಟ್ಯಾಂಕರ್ ನಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ಪ್ರಸ್ತುತ ಸಂಪೂರ್ಣ ನಂದಿಸಲಾಗಿದೆ. ಆದರೆ ಹೊಗೆ ಬರುತ್ತಲೇ ಇದ್ದು, ಅದನ್ನೂ ನಂದಿಸುವ ಕಾರ್ಯಾಚರಣೆ ಸಾಗಿದೆ ಎಂದು ತಿಳಿಸಿದೆ.
20ಲಕ್ಷ ಬ್ಯಾರಲ್ ಆಯಿಲ್ ಹೊತ್ತು ತರುತ್ತಿದ್ದ ಇಂಡಿಯನ್ ಆಯಿಲ್ ಕಾರ್ಪೊರೇಷನ್’ಗೆ ಸೇರಿದ ನ್ಯೂ ಡೈಮಂಡ್ ಟ್ಯಾಂಕರ್’ನಲ್ಲಿ ಬೆಂಕಿ ಹೊತ್ತುಕೊಂಡಿತ್ತು. ಈ ಹಡಗಿನಲ್ಲಿ 18 ಫಿಲಿಪ್ಪೀನ್ಸ್ ಹಾಗೂ 5 ಗ್ರೀಕ್ ಮೂಲದ ಸಿಬ್ಬಂದಿಗಳಿದ್ದರು ಎಂದು ತಿಳಿದು ಬಂದಿದೆ.