ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬ್ಯಾಡ್ಮಿಂಟನ್ ಕೋರ್ಟ್ ನ್ನು ಕೇಂದ್ರ ಸಚಿವ ಡಿವಿ ಸದಾನಂದಗೌಡ ಉದ್ಘಾಟಸಿದರು..!

0

ಮಹಾಲಕ್ಷ್ಮೀ ಲೇಔಟ್:28/09. ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ನಾಗಪುರ ವಾರ್ಡ್ ನಂ 67ರ ಭೋವಿ ಪಾಳ್ಯದಲ್ಲಿ ಬಿಬಿಎಂಪಿ ವತಿಯಿಂದ ನೂತನವಾಗಿ ನಿರ್ಮಿಸಿರುವ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬ್ಯಾಡ್ಮಿಂಟನ್ ಕೋರ್ಟ್ ನ್ನು ಕೇಂದ್ರ ಸಚಿವ ಡಿವಿ ಸದಾನಂದಗೌಡ ಉದ್ಘಾಟಸಿದರು. ನಂತರ ಮಾತನಾಡಿದ ಸದಾನಂದ ಗೌಡರು ಕೇಂದ್ರ ಸಚಿವರಾದ ಶ್ರೀ ಡಿವಿ ಸದಾನಂದ ಗೌಡರು ಕೊವಿಡ್ -19 ಮಹಾಮಾರಿ ಕೊರೊನಾ ವೈರಸ್ ರೋಗದಿಂದ ದೇಶವೇ ಸಂಕಷ್ಟದಲ್ಲಿದೆ. ಇಂಥ ಸಮಯದಲ್ಲಿ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯುತ್ತಮ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವ ಸಚಿವರಾದ ಕೆ ಗೋಪಾಲಯ್ಯ ನವರು ಹಾಗೂ ಸ್ಥಳೀಯ ಪಾಲಿಕೆ ಸದಸ್ಯರಾದ ಭದ್ರೆಗೌಡರೂ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಅಭಿನಂದಿಸಿದರು. ಸಾರ್ವಜನಿಕರು ಈ ಕೋರ್ಟ್ ನ್ನೂ ತಮ್ಮ ದೈಹಿಕ ಅಂತರ ಕಾಯ್ದು ಕೊಂಡು ಉತ್ತಮ ಆರೋಗ್ಯಕ್ಕೆ ಬಳಸಿಕೊಳ್ಳುವುದು ಒಳ್ಳೆಯದು ಆರೋಗ್ಯ ಮಾನಸಿಕ ಹಾಗೂ ಸ್ವಾಸ್ಥ ಕಾಪಾಡಲು ಎಲ್ಲ ಕಡೆ ಈ ರೀತಿ ಕಾರ್ಯಗಳು ನಡೆದರೆ ಒಳ್ಳೆಯ ವಾತಾವರಣ ನಿರ್ಮಾಣವಾಗಿ ಎಲ್ಲರೂ ಆರೋಗ್ಯದಿಂದ ಇರಬಹುದು ಎಂದರು. ನಂತರ ಮಾತನಾಡಿದ ಸ್ಥಳೀಯ ಶಾಸಕರು ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಶ್ರೀ ಕೆ ಗೋಪಾಲಯ್ಯ ಅವರು ಮಹಾ ಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ ಇದಕ್ಕೆ ಎಲ್ಲ ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರದಿಂದ ಇಂದು ಕ್ಷೇತ್ರ ಬೆಳವಣಿಗೆ ಹೊಂದಿದೆ. ಸ್ಥಳೀಯ ಪಾಲಿಕೆ ಸದಸ್ಯರು ಹಾಗೂ ಮಾಜಿ ಉಪ ಮಹಾಪೌರರಾದ ಭಧ್ರೆಗೌಡರು ಬಿಬಿಎಂಪಿ ವತಿಯಿಂದ ಇಂದು ಈ ಬ್ಯಾಡ್ಮಿಂಟನ್ ಕೋರ್ಟ್ ಮತ್ತು ಮಕ್ಕಳ ಉದ್ಯಾನವನವನ್ನು ಇಂದು ಸಚಿವದ್ವಯರ ಯಿಂದ ಲೋಕಾರ್ಪಣೆ ಮಾಡಿದ್ದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ರಾದ ರಾಘವೇಂದ್ರ ಶೆಟ್ಟಿ, ಮಾಜಿ ಉಪ ಮಹಾಪೌರರಾದ ಎಸ್ ಹರೀಶ್, ಬೆಂಗಳೂರು ಉತ್ತರ ಬಿಜೆಪಿ ಎನ್, ಜಯರಾಮ ಕೆ ಬಿ ವೆಂಕಟೇಶ್ ಮೂರ್ತಿ, ಸೇರಿದಂತೆ ಹಲವು ಮುಖಂಡರು ಬಿಬಿಎಂಪಿ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here