ಶ್ರೀ ಬಸವಂತಪ್ಪ ತಳವಾರ ಇವರಿಂದ ಕರಪತ್ರ ವಿತರಣೆ !

0

ವರದಿ ಮಹೇಶ ಅಚ್ಚಿನಗೌಡ್ರ
ರೋಣ:ಗದಗ ಜಿಲ್ಲಾ ರೋಣ ತಾಲೂಕ ಹುನಗುಂಡಿ ಗ್ರಾಮದಲ್ಲಿ ಅಗಸ್ಟ 8 ಶನಿವಾರ ರಂದು ರಾಜ್ಯ ಸರಕಾರದ ಮುಖ್ಯಮಂತ್ರಿಗಳಾದ ಶ್ರೀ ಬಿ ಯಸ್ ಯಡಿಯೂರಪ್ಪ ನವರ ಒಂದು ವರ್ಷದ ಸಾಧನಾ ಕರಪತ್ರವನ್ನು ಗದಗ ಜಿಲ್ಲಾ ಬಿಜೆಪಿ ಯಸ್ ಟಿ ಮೋರ್ಚಾದ ಮಾಜಿ ಅಧ್ಯಕ್ಷರಾದ ಶ್ರೀ ಬಸವಂತಪ್ಪ ಯಸ್ ತಳವಾರ ಕರಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಮುಖ್ಯಮಂತ್ರಿಗಳಾದ ಬಿ ಯಸ್ ಯಡಿಯೂರಪ್ಪ ಅವರು ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ಜನಪರ ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಸರಕಾರ ಹೂ ಬೆಳೆಗಾರರಿಗೆ 25000 ರೂಪಾಯಿಗಳು ನೇಕಾರರ ಸಾಲ ಮನ್ನಾ ಬಾಕಿ 80 ಕೋಟಿ ರೂಪಾಯಿ ಬಿಡುಗಡೆ ಮಾಡಿ ನೇಕಾರರಿಗೆ ಹೊಸ ಸಾಲ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ.ಟ್ಯಾಕ್ಸಿ ಚಾಲಕರಿಗೆ ಆಟೋ ಚಾಲಕರಿಗೆ ಹಾಗೂ ಕ್ಷೌರಿಕರಿಗೆ ತಲಾ 5 ಸಾವಿರ ರೂಪಾಯಿ ಪರಿಹಾರ ನೀಡಿದ್ದಾರೆ. ಕೃಷಿ ತೋಟಗಾರಿಕೆ ಮತ್ತು ಪಶುಪಾಲನೆ, ನಗರಾಭಿವೃದ್ಧಿ ಇಲಾಖೆ ಧಾರ್ಮಿಕ ದತ್ತಿ ಇಲಾಖೆ ವೈದ್ಯಕೀಯ ಶಿಕ್ಷಣ ನೀರಾವರಿ ಮುಂತಾದ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧನೆಯನ್ನು ಮಾಡಿದೆ ಎಂದು ಹೇಳಿದರು. ನಂತರ ಮನೆ ಮನೆಗೆ ತೆರಳಿ ಕರಪರ್ತ ವಿತರಿಸಿದರು .
ಈ ಸಂದರ್ಭದಲ್ಲಿ
ಬಿ ವಾಯ್ ಮಂಡಸೊಪ್ಪಿ
ಪಿ ಯಸ್ ಸಾಲಿಮಠ
ಕೆ ಬಿ ವಿರಸಣ್ಣವರ
ಬಿ ಎಂ ಗುಲಪ್ಪನವರ
ಈರಣ್ಣ ಮಂಡಸೊಪ್ಪಿ
ಗ್ರಾಮದ ಗುರು ಹಿರಿಯರು ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here