ಸಿಂದಗಿ : ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಅನುವು ಮಾಡದೇ ಬೆಳಗಾವಿ ಜಿಲ್ಲಾಡಳಿತ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಿಂದಗಿ ಘಟಕ ಪದಾಧಿಕಾರಿಗಳು ತಹಶೀಲದಾರ ಕಚೇರಿಗೆ ತೆರಳಿ ತಹಶೀಲದಾರ ಮುಖಾಂತರ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಸಂಗೋಳ್ಳಿ ರಾಯಣ್ಣ ಯುವ ಘರ್ಜನೆ ಅಧ್ಯಕ್ಷ ಮಾಳಿಂಗರಾಯ ವಾಲೀಕಾರ ಹಾಗೂ ಮಲ್ಲಿಕಾರ್ಜುನ ಸಾವಳಸಂಗ ಮಾತನಾಡಿ, ಕಿತ್ತೂರ ಸಂಸ್ಥಾನದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರ ಮರಣ ಹೊಂದಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಅಲ್ಲದೇ ರಾಷ್ಟ್ರಧ್ವಜದ ಸಮೇತ ಜಿಲ್ಲಾಡಳಿತ ತೆಗೆದು ಹಾಕಿದ್ದು ಉಗ್ರವಾಗಿ ಖಂಡಿಸಿದರು. ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತನ್ನ ತ್ಯಾಗ ಬಲಿದಾನವನ್ನೇ ನೀಡಿದ್ದಾನೆ. ಅಂಥಹ ವ್ಯಕ್ತಿಗೆ ಸರಕಾರ ಅವಮಾನಿಸಿದ್ದಾರೆ. ನಾವು ಹೋರಾಟ ದಾಖಲೆಗಳನ್ನು ಸರಕಾರಕ್ಕೆ ಸಲ್ಲಿಸಲು ಸಿದ್ದರಿದ್ದೇವೆ. ಈ ಕೂಡಲೇ ದೇಶಭಕ್ತ ಪುತ್ಥಳಿಯನ್ನು ಪೀರನವಾಡಿ ಗ್ರಾಮದಲ್ಲಿ ಸ್ಥಾಫಿಸಬೇಕು. ತಪ್ಪಿಸ್ಥರ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಒಂದು ವೇಳೆ ಸರಕಾರ ಈ ಕ್ರಮ ಕೈಕೊಳ್ಳದಿದ್ದಲ್ಲಿ ರಾಜ್ಯಾದಾದ್ಯಂತ ಕುರುಬ ಸಮಾಜದ ಸಂಘಟನೆಗಳು ಹಾಗೂ ವಿವಿಧ ಪರ ಕನ್ನಡ ಸಂಘಟನೆಗಳು ಉಗ್ರವಾಗಿ ಹೋರಾಟ ಮಾಡುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಪದಾಧಿಕಾರಿಗಳಾದ ಎನ್. ರವಿಕುಮಾರ, ಶಾಂತಪ್ಪ ಹಿರೇಕುರಬರ, ಶಿವು ಆಲಮೇಲ, ಮಹಾಂತೇಶ ಸಾತಿಹಾಳ, ಶ್ರೀಕಾಂತ ಸೋಮಜ್ಯಾಳ, ದಾನಪ್ಪ ಚನಗೊಂಡ, ನಿಂಗು ಬಗಲಿ, ಕುಮಾರ ದೇಸಾಯಿ, ಈರಣ್ಣ ರಾವೂರ, ಕುಮಾರ ಗೊಂಧೋಳಿ, ಮಹಿಬೂಬ ದೊಡಮನಿ, ಸದ್ದಾಂ ಆಲಗೂರ, ಮುತ್ತು ಪಾಟೀಲ, ಮಾಳಿ ವಾಲೀಕಾರ, ಶ್ರೀಶೈಲ ಬಿರಗೊಂಡ ಹಾಗೂ ವಿಜಯಕುಮಾರ ಯಾಳವಾರ ಸೇರಿದಂತೆ ಹಲವರು ಭಾಗಿಯಾಗಿದ್ದರು.
ವರದಿ: ಮಹಾಂತೇಶ ನೂಲಾನವರ, ಸಿಂದಗಿ.