ಸಂಡೆ ಕರ್ಫ್ಯೂ ಡೋಂಟ್ ‌ಕೇರ್..! ಸಾಮಾಜಿಕ ಅಂತರವಿಲ್ಲದೆ ಮೋಜು ಮಸ್ತಿ ಮಾಡುತ್ತಾ ನೀರಾಟದಲ್ಲಿ ತೊಡಗಿದ ವಿದ್ಯಾವಂತ ಶ್ರೀಮಂತ ಜನರು |

0

ಸಂಡೆ ಕರ್ಫ್ಯೂ ಡೋಂಟ್ ‌ಕೇರ್..! ಸಾಮಾಜಿಕ ಅಂತರವಿಲ್ಲದೆ
ಮೋಜು ಮಸ್ತಿ ಮಾಡುತ್ತಾ ನೀರಾಟದಲ್ಲಿ ತೊಡಗಿದ
ವಿದ್ಯಾವಂತ ಶ್ರೀಮಂತ ಜನರು

ಉಡುಪಿ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಪ್ರತಿ ಭಾನುವಾರ ರಾಜ್ಯದಾದ್ಯಂತ ‘ಕರ್ಫ್ಯೂ’ ಮಾದರಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡುವಂತೆ ಸರಕಾರ ಘೋಷಿಸಿತ್ತು.

ಅದರೆ ಇಲ್ಲಿ‌ ಸಂಡೆ ಕರ್ಫ್ಯೂ ಡೋಂಟ್ ‌ಕೇರ್ ಎಂದ ಜನತೆ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ
ವಿದ್ಯಾವಂತ ಶ್ರೀಮಂತ ‌ಜನರು ಮೋಜು ಮಸ್ತಿ ಮಾಡುತ್ತಾ ನೀರಾಟದಲ್ಲಿ ತೊಡಗಿರುವುದು ಕಾರ್ಕಳದಲ್ಲಿ ಭಾನುವಾರ ಕಂಡು ಬಂದಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ಪ್ರವಾಸಿ ತಾಣವಾದ ಪಾಲ್ಸ್ ಗೆ ಭಾನುವಾರದಂದು ಅಗಮಿಸುವ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿದ್ದು ಇಂದು ಭಾನುವಾರ ಮತ್ತೆ ಶ್ರೀಮಂತ ‌ಜನರು ತಮ್ಮ ಐಷಾರಾಮಿ ಕಾರುಗಳಲ್ಲಿ ಕುಟುಂಬ ಸಮೇತವಾಗಿ ಅಗಮಿಸಿ ಪಾಲ್ಸ್ ನಲ್ಲಿ ಜಲಕ್ರೀಡೆಯಲ್ಲಿ ತೊಡಗಿರುವುದು ಸಾರ್ವಜನಿಕ ವಲಯದಲ್ಲಿ ‌ಬಾರೀ ಸುದ್ದಿಯಾಗಿದೆ. ಸುಮಾರು 50 ಕ್ಕೂ ಅಧಿಕ ಮಂದಿ ಅಗಮಿಸಿ ಸಾಮಾಜಿಕ ‌ಅಂತರ‌ ಕಾಯ್ದು ಕೊಳ್ಳದೇ ಮೋಜು, ಮಸ್ತಿ ಮಾಡಿಕೊಂಡು ನೀರಾಟದಲ್ಲಿ ತೊಡಗಿರುವುದು ಕಂಡಬಂದಿದೆ.

ಲಾಕ್ ಡೌನ್ ನಿಯಮಗಳನ್ನು ‌ಉಲ್ಲಂಘಿಸಿದವರ ವಿರುದ್ದ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದು ಬಡವರಿಗೆ ಒಂದು ನಿಯಮ ಶ್ರೀಮಂತರಿಗೆ ಒಂದು ನಿಯಮ ಅನ್ನುವುದು‌ ಈ‌ ಮೂಲಕ ಮತ್ತೆ ಸಾಬೀತಾಗಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ವರದಿ: ಹರೀಶ್ ಸಚ್ಚೇರಿಪೇಟೆ

LEAVE A REPLY

Please enter your comment!
Please enter your name here