ಹತ್ರಸ್‌ನ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ದಲಿತ ಯುವತಿಗೆ ಅಪಮಾನವಾಗುವಂತೆ ಬಿಜೆಪಿ ಚಿತ್ರಣ ನೀಡುತ್ತಿದೆ ಎಂದು ಗುರುವಾರ ಆರೋಪಿಸಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಆಕೆಗೆ ಬೇಕಾಗಿರುವುದು ನ್ಯಾಯವೇ ಹೊರತು, ಅಪಮಾನ ಅಲ್ಲ ಎಂದಿದ್ದಾರೆ.
ಮಹಿಳೆಯ ವಿರುದ್ಧ ನಡೆದಿರುವ ಅಪರಾಧಕ್ಕೆ, ಮಹಿಳೆಯೇ ಕಾರಣ ಎಂಬರ್ಥದಲ್ಲಿ ಉತ್ತರಪ್ರದೇಶದ ಆಡಳಿತಾರೂಢ ಬಿಜೆಪಿ ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ಹತ್ರಸ್‌ನಲ್ಲಿ ಗಂಭೀರ ಸ್ವರೂಪದ ಅಪರಾಧ ನಡೆದಿದೆ. 20 ವರ್ಷದ ಯುವತಿ ಮೃತಪಟ್ಟಿದ್ದಾಳೆ. ಆಕೆಯ ಶವವನ್ನು ಕುಟುಂಬದ ಅನುಮತಿ ಇಲ್ಲದೆ ಅಂತ್ಯಕ್ರಿಯೆ ನಡೆಸಲಾಗಿದೆ. ಆಕೆಗೆ ನ್ಯಾಯ ಸಲ್ಲಬೇಕಾಗಿದೆ ಎಂದು ಅವರು ಹೇಳಿದರು. ಪ್ರಿಯಾಂಕಾ ಗಾಂಧಿ ವಾದ್ರಾ ಹ್ಯಾಶ್‌ಟ್ಯಾಗ್ ಬಳಸಿ ಬಿಜೆಪಿಯದ್ದು ನಾಚಿಕೆಗೇಡಿನ ವರ್ತನೆ ಎಂದು ಟೀಕಿಸಿದ್ದಾರೆ.