ಸಂಸತ್ತಿನ ಮುಂಗಾರು ಅಧಿವೇಶನ ಸೆ.14ರಿಂದ ಅ.1 ರ ತನಕ ನಡೆಸೋದಕ್ಕೆ ಶಿಫಾರಸು

0

ಸಂಸತ್ತಿನ ಮುಂಗಾರು ಅಧಿವೇಶನ ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1ರ ತನಕ ನಡೆಸುವುದಕ್ಕೆ ಕ್ಯಾಬಿನೆಟ್ ಕಮಿಟಿ ಶಿಫಾರಸು ಮಾಡಿದೆ. ಈ ಅಧಿವೇಶದಲ್ಲಿ ಒಟ್ಟು 18 ಕಲಾಪಗಳು ನಡೆಯಲಿದ್ದು, ಕಲಾಪ ದಿನಾಂಕಗಳ ಪಟ್ಟಿ ನಂತರದಲ್ಲಿ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್​ -19 ಸೋಂಕಿನ ಕಾರಣಕ್ಕೆ ಸಂಸತ್ತಿನ ಮುಂಗಾರು ಅಧಿವೇಶನ ಹಲವು ಪ್ರಥಮಗಳಿಗೆ ಕಾರಣವಾಗಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಲೋಕಸಭೆ, ರಾಜ್ಯಸಭೆಗಳ ಚೇಂಬರ್​, ಗ್ಯಾಲರಿಯ ಪೂರ್ಣ ಪ್ರಮಾಣದ ಬಳಕೆ ಈ ಬಾರಿ ಸದಸ್ಯರಿಗೇ ಮೀಸಲಾಗಿ ಇರಲಿದೆ.

ರಾಜ್ಯಸಭಾ ಸಚಿವಾಲಯದ ಮಾಹಿತಿ ಪ್ರಕಾರ, ಮೇಲ್ಮನೆಯ ಎರಡೂ ಚೇಂಬರ್​​ಗಳಲ್ಲಿ ಮತ್ತು ಗ್ಯಾಲರಿಗಳಲ್ಲಿ ಸದಸ್ಯರು ಕೂರಲಿದ್ದಾರೆ. ಭಾರತದ ಸಂಸತ್​ ಇತಿಹಾಸದಲ್ಲಿ 1952ರ ನಂತರ ಇಂತಹ ಕ್ರಮ ಇದೇ ಮೊದಲ ಬಾರಿ ತೆಗೆದುಕೊಳ್ಳಲಾಗಿದೆ. ಇದರಂತೆ, ಚೇಂಬರ್​ನಲ್ಲಿ 60 ಸದಸ್ಯರು, ಗ್ಯಾಲರಿಯಲ್ಲಿ 51 ಸದಸ್ಯರು ಕುಳಿತರೆ, ಉಳಿದ 132 ಸದಸ್ಯರು ಲೋಕಸಭೆಯ ಚೇಂಬರ್​ನಲ್ಲಿ ಕುಳಿತುಕೊಳ್ಳಲಿದ್ದಾರೆ. ಲೋಕಸಭೆ ಕಲಾಪಕ್ಕೂ ಇಂಥದ್ದೇ ಉಪಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. (ಏಜೆನ್ಸೀಸ್)

LEAVE A REPLY

Please enter your comment!
Please enter your name here