ಸತತ ಗೋವು ಹತ್ಯೆ ಪ್ರಕರಣ:ವ್ಯಕ್ತಿ ಆತ್ಮಹತ್ಯೆ

0

ಕೊಡಗು(ಐಗೂರು): ಸರಣಿ ಗೋವಿನ ಹತ್ಯೆ ಮಾಡಿ ಕುಖ್ಯಾತಿ ಪಡೆದಿರುವ ಬಿಬಿಟಿಸಿ ಎಸ್ಟೇಟ್ ನಲ್ಲಿ ಘಟನೆ ನಡೆದ ಬಳಿಕ ಸ್ಥಳೀಯ ಕಾರಝ್ಮಿಕರು ಮತ್ತು ಕಂಪೆನಿ ಕಾರ್ಮಿಕರ ನಡುವಿನ ಮುಸುಕಿನ ಗುದ್ದಾಟದ ಪರಿಣಾಮ ವ್ಯಕ್ತಿಯೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಗೂರು ಗ್ರಾಮದ ವಿಜಯನಗರ ನಿವಾಸಿ ರಾಮದಾಸ್ 46 ಆತ್ಮಹತ್ಯೆ ಮಾಡಿಕೊಂಡವರು. ಎಸ್ಟೇಟ್ ಟಿಂಬರ್ ಕೆಲಸ ಮಾಡಿಕೊಂಡಿದ್ದ ಇವರು ಎಸ್ಟೇಟ್ ನಲ್ಲಿ ನಡೆದ ಘಟನೆ ಹೊರಗೆ ತಿಳಿಸಿದ್ದು ಈತನೇ ಎಂದು ಸ್ಥಳೀಯ ಕಾರ್ಮಿಕರಿಗೆ ಕೆಲಸ ನೀಡುತ್ತಿರಲಿಲ್ಲ,ಇದೇ ಕಾರಣಕ್ಕೆ ರಾಮದಾಸ್ ನನ್ನು ಎಸ್ಟೇಟ್ ಸಿಬ್ಬಂಧಿಯಲ್ಲಿ ಕ್ಷೆಮೆ ಯಾಚಿಸಿದಲ್ಲಿ ಕೆಸ ನೀಡುವುದಾಗಿ ಭರವಸೆ ನೀಡಿದ ಮೇರೆಗೆ ಎಸ್ಟೇಟ್ ಸಬ್ಬಂಧಿಗಳ ಜೊತೆ ತೆರಳಿ ಕ್ಷೆಮೆಯಾಚಿಸಿದ್ದಾರೆ ಎಪ್ನಲಾಗಿದ್ದು ಬಳಿಕ ತನ್ನ ಸಹೋದರಿ ಮನೆಗೆ ಬಂದು ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ರಾಮದಾಸ್ ಕುಟುಂಬಸ್ಥರು ಶವವಿಟ್ಟು ಪತ್ತಿಭಟನೆ ನಡೆಸಿದರು,ಆತ್ಮಹತ್ಯೆಗೆ ಎಸ್ಟೇಟ್ ಸಿಬ್ಬಂಧಿಗಳೇ ನೇರ ಕಾರಣ ಎಂದು ಆರೋಪಿಸಿ ಹನ್ನೊದು ಮಂದಿ ಮೇಲೆ ಸೋಮವಾರಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here