ಡೀಸೆಲ್ ಹಾಗೂ ಪೆಟ್ರೋಲ್ ದರದಲ್ಲಿ ಬುಧವಾರ ಕೂಡ ತೈಲ ಮಾರ್ಕೆಟಿಂಗ್ ಕಂಪೆನಿಗಳು ಯಾವುದೇ ಬದಲಾವಣೆ ಮಾಡಿಲ್ಲ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿರುವುದರಿಂದ ಭಾರತದಲ್ಲೂ ಪೆಟ್ರೋಲ್- ಡೀಸೆಲ್ ದರದಲ್ಲಿ ಏರಿಳಿತವಾಗಿಲ್ಲ. ಇಂದಿಗೂ ಸೇರಿ ಸತತ 5ನೇ ದಿನ ಪೆಟ್ರೋಲ್- ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಸೆನ್ಸೆಕ್ಸ್ 304, ನಿಫ್ಟಿ 76 ಪಾಯಿಂಟ್ ಹೆಚ್ಚಳ; ಟೈಟಾನ್ ಟೈಮ್ ಸೂಪರ್
ಇನ್ನೂ ಹೇಳಬೇಕು ಅಂದರೆ, 15 ದಿನಗಳಿಂದ ಪೆಟ್ರೋಲ್ ದರ ಸ್ಥಿರವಾಗಿದೆ. ಈ ಹಿಂದಿನ ವಾರಗಳಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಆಗಿಲ್ಲ. ಹತ್ತಿರ ಹತ್ತಿರ 10% ಕುಸಿದು, ಬ್ಯಾರಲ್ ಗೆ $ 40 ತಲುಪಿತ್ತು. ಕಳೆದ ಕೆಲ ದಿನಗಳಿಂದ ಏರಿಕೆ ಕಂಡು, ಸದ್ಯಕ್ಕೆ ಬ್ಯಾರೆಲ್ ಗೆ $ 42.5 ಇದೆ. ಕೊರೊನಾ ವೈರಾಣು ಆರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ ತೈಲ ಬೇಡಿಕೆ ಮೇಲೆ ಪರಿಣಾಮ ಬೀರಿದೆ.
ಮಾರ್ಕೆಟ್ ನಲ್ಲಿ ಬೆಲೆಯನ್ನು ಮೇಲಕ್ಕೆ ತೆಗೆದುಕೊಂಡು ಹೋಗುವಂಥ ಯಾವ ಬೆಳವಣಿಗೆಯೂ ನಡೆಯದ ಹಿನ್ನೆಲೆಯಲ್ಲಿ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಬೆಲೆಯು ಇಳಿಕೆ ಹಾದಿಯಲ್ಲಿದೆ. ಬೆಂಗಳೂರಿನಲ್ಲಿ ಬುಧವಾರದಂದು ಪೆಟ್ರೋಲ್ ರೀಟೇಲ್ ದರ ಲೀಟರ್ ಗೆ 83.39 ರು. ಇದ್ದರೆ, ಡೀಸೆಲ್ ದರ 74.35 ರು. ಇದೆ.