ಸತ್ಯ ಬಹಿರಂಗ: ವುಹಾನ್ ಲ್ಯಾಬಿನಿಂದಲೇ ಕೊವಿಡ್19 ಉತ್ಪತ್ತಿ

0

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಸರ್ಕಾರದ ನಿಯಂತ್ರಣದಲ್ಲಿರುವ ಲ್ಯಾಬಿನಿಂದಲೇ ಜಾಗತಿಕ ಸಾಂಕ್ರಾಮಿಕ ವೈರಸ್ ಕೊವಿಡ್ 19 ಉತ್ಪತ್ತಿಯಾಗಿದ್ದು, ಅಲ್ಲಿಂದಲೇ ಎಲ್ಲೆಡೆ ಪ್ರಸಾರವಾಗಿದೆ ಎಂದು ಸಂಶೋಧಕಿ ಡಾ. ಲಿ ಮೆಂಗ್ ಯಾನ್ ಪ್ರತಿಪಾದಿಸಿದ್ದಾರೆ.

ವುಹಾನ್ ಲ್ಯಾಬಿನಲ್ಲೇ ಕೊರೊನಾವೈರಸ್ ಸೃಷ್ಟಿಸಲಾಗಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ, ಇದು ಬಾವಲಿ, ಪಶು, ಪಕ್ಷಿ, ಸಸ್ತನಿಯಿಂದ ಉತ್ಪಾದನೆ ಹಾಗೂ ಹರಡುವಂಥ ವೈರಸ್ ಅಲ್ಲವೇ ಅಲ್ಲ, ಇದನ್ನು ಪ್ರಯೋಗಾಲಯದಲ್ಲೇ ಸೃಷ್ಟಿ ಮಾಡಲಾಗಿದೆ. ಈ ಬಗ್ಗೆ ಇರುವ ಸಾಕ್ಷಿ, ಪುರಾವೆಗಳನ್ನು ಮುಂದಿಟ್ಟುಕೊಂಡು ಮುಂದಿನ ವಿಜ್ಞಾನ ಸರಣಿ ಲೇಖನವನ್ನು ಸಾರ್ವಜನಿಕರ ಮುಂದಿಡುತ್ತೇನೆ ಎಂದು ವೈರೊಲೊಜಿಸ್ಟ್ ಹೇಳಿದ್ದಾರೆ.

ಚೀನಾದ ಶಾಂಡಾಂಗ್ ಪ್ರಾಂತ್ಯದ ಕ್ವಿಂಗ್ಡಾವೋ ಮೂಲದ ವೈರಾಣು ತಜ್ಞೆ, ಸಂಶೋಧಕಿ ಡಾ. ಲೀ ಅವರು ಸದ್ಯ ಹಾಂಕಾಂಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಲ್ಲಿ ವೈರಾಲಜಿ ಮತ್ತು ಇಮ್ಯುನೊಲಾಜಿಯಲ್ಲಿ ಪರಿಣತಿ ಹೊಂದಿದ್ದಾರೆ. ಚೀನಾದಲ್ಲಿದ್ದರೆ ಬಂಧನವಾಗಬಹುದು ಎಂಬ ಭೀತಿಯಲ್ಲಿ ಏಪ್ರಿಲ್ ತಿಂಗಳಿನಲ್ಲಿ ಚೀನಾ ತೊರೆದು ಅಮೆರಿಕದಲ್ಲಿ ನೆಲೆಗೊಂಡಿದ್ದಾರೆ.

ಪ್ರಕೃತಿಯಿಂದ ಬಂದ ವೈರಸ್ ಅಲ್ಲ

ಇದು ವುಹಾನ್ ಮಾರುಕಟ್ಟೆಯಿಂದ ಹಬ್ಬಿದ ವೈರಸ್ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಆದರೆ, ಪ್ರಯೋಗಾಲಯದಿಂದ ಹಬ್ಬಿದ್ದು ಎಂದು ವಿಜ್ಞಾನಿಗಳು ಹೇಳಿದರೂ ಸರ್ಕಾರ ವರದಿಯನ್ನು ತಿರಸ್ಕರಿಸಿ, ಎಲ್ಲೆಡೆ ಸುಳ್ಳು ಸುದ್ದಿ ಹಬ್ಬುವಂತೆ ಮಾಡಿದರು..

ವಿಶ್ವ ಆರೋಗ್ಯ ಸಂಸ್ಥೆ ಜೊತೆ ನನ್ನ ಮೇಲಿನ ಅಧಿಕಾರಿಗಳು ಕೈಜೋಡಿಸಿರಬಹುದು ಅಥವಾ ವಿಶ್ವ ಆರೋಗ್ಯ ಸಂಸ್ಥೆಗೆ ಗೊತ್ತಿಲ್ಲದಂತೆ ರಹಸ್ಯವನ್ನು ಮುಚ್ಚಿಟ್ಟಿದ್ದರು. ಆದರೆ, ಒಂದೆರಡು ತಿಂಗಳಿನಲ್ಲೇ ಸತ್ಯ ಹೊರಬರುವ ವೇಳೆಗೆ ಪರಿಸ್ಥಿತಿ ಕೈ ಮೀರಿತ್ತು ಎಂದು ಲೀ ವಿವರಿಸಿದ್ದಾರೆ. ಈ ಎಲ್ಲಾ ಸತ್ಯವನ್ನು ಜನ ಸಾಮಾನ್ಯರಿಗೆ ಅರ್ಥವಾಗುವಂತೆ ವಿವರಿಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್​)

LEAVE A REPLY

Please enter your comment!
Please enter your name here