ಇಡೀ ವಿಶ್ವ ಕ್ರಿಕೆಟ್ ಲೋಕವೇ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನತ್ತ ತನ್ನ ಚಿತ್ತ ಹರಿಸಿದೆ. ಜೈವಿಕ ಸುರಕ್ಷ ವಾತಾವರಣದಲ್ಲಿ ಲೀಗ್ ಆಯೋಜಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಈಗಾಗಲೇ ಸಿದ್ಧತೆ ಕೈಗೊಂಡಿದೆ. ಹಿಂದಿನ ವರ್ಷಗಳಂತೆ ಆಟಗಾರರಿಗೆ ಈ ಬಾರಿ ಮನರಂಜನೆ ದಕ್ಕುವುದು ಕಡಿಮೆ. ಅಲ್ಲದೆ, ಅಕ್ಕಪಕ್ಕ ಕುಳಿತು ಕೊಳ್ಳುವಂತಿಲ್ಲ. ಇದಕ್ಕೆ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೇಟ್ ಲೀ ಐಪಿಎಲ್ ಆಟಗಾರರಿಗೆ ಒಂದು ಸಲಹೆ ನೀಡಿದ್ದಾರೆ. ಜೈವಿಕಾ ಸುರಕ್ಷಾ ವಾತಾವಾರಣದಲ್ಲಿ ಕಾಲಕಳೆಯಲು ಆಟಗಾರರು ಗಿಟಾರ್, ಕಾರ್ಡ್ ಗೇಮ್ಸ್ ಕಳಿತುಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಕರೊನಾ ವೈರಸ್ ಭೀತಿ ನಡುವೆಯೂ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯೂ ಸೆ.19 ರಿಂದ ನ.10 ರವರೆಗೆ ಯುಎಇಯ ದುಬೈ, ಶಾರ್ಜಾ ಹಾಗೂ ಅಬಿಧಾಬಿಯಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ಬ್ರೇಟ್ ಲೀಗ್, ಐಪಿಎಲ್ನಲ್ಲಿ ಆಟಗಾರನಾಗಿಯೂ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ವೀಕ್ಷಕ ವಿವರಣೆಗಾರರನಾಗಿಯೂ ನಿರ್ವಹಿಸುತ್ತಿದ್ದಾರೆ. ಯುಎಇಯಲ್ಲಿ ಐಪಿಎಲ್ ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಬ್ರೇಟ್ ಲೀ, ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ. ಅನಾವಶ್ಯಕವಾಗಿ ಆಟಗಾರರು ಹೊರ ಹೋಗದೆ, ಜವಾಬ್ದಾರಿಯುತವಾಗಿ ವರ್ತಿಸಬೇಕಾಗಿದೆ. ಹೋಟೆಲ್ನಿಂದ ಹೊರಬರುವಂತಿಲ್ಲ. ಈ ವೇಳೆ ಟೈಂ ಪಾಸ್ಗಾಗಿ ಗಿಟಾರ್, ಕಾರ್ಡ್ ಗೇಮ್ಗಳನ್ನು ಆಡಬೇಕು ಎಂದು ಲೀ ಅಭಿಪ್ರಾಯಪಟ್ಟಿದ್ದಾರೆ. ಇಡೀ ವಿಶ್ವದಾದ್ಯಂತ ಜನರು ಕ್ರಿಕೆಟ್ ನೋಡಲು ಬಯಸುತ್ತಾರೆ. ಈ ಬಾರಿ ಜನರು ಕ್ರೀಡೆಯನ್ನು ಸಾಕಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆಟಗಾರರು ನಿಯಮ ಪಾಲಿಸಬೇಕು ಎಂದು ಲೀ ಮನವಿ ಮಾಡಿದ್ದಾರೆ.
ಕನ್ನಡಿಗರಾದ ಅನಿಲ್ ಕುಂಬ್ಳೆ ಮಾರ್ಗದರ್ಶನ ಹಾಗೂ ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಉತ್ತಮವಾಗಿದೆ. ಅನುಭವ, ಜ್ಞಾನವೇ ತಂಡಕ್ಕೆ ಅನುಕೂಲವಾಗಲಿದೆ ಎಂದು ಲೀ ಅಭಿಪ್ರಾಯಪಟ್ಟಿದ್ದಾರೆ. ಉತ್ತಮ ಆಟಗಾರರನ್ನು ಹೊಂದಿರುವ ಕಿಂಗ್ಸ್ ಇಲೆವೆನ್ ಜಯ ದಾಖಲಿಸಬೇಕು ಎಂದು ಕಿಂಗ್ಸ್ ಇಲೆವೆನ್ ಹಾಗೂ ಕೆಕೆಆರ್ ಪರ ಆಡಿರುವ ಲೀ ಹೇಳಿದ್ದಾರೆ.