ಸರ್ಕಾರ ಗಳು ಜಾರಿಗೆ ತಂದಿರುವ ಸುಗ್ರೀವಾಜ್ಞೆ ವಿರೋಧಿಸಿ ಸಭೆ.

0

ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಸುಗ್ರೀವಾಜ್ಞೆ ಗಳು ರೈತರಿಗೆ ಕಂಟಕವಾಗಿದ್ದು ಅವುಗಳನ್ನು ಕೂಡಲೆ ಹಿಂಪಡೆಯಬೇಕು ಇಲ್ಲದಿದ್ದರೆ ಹೋರಾಟದ ರೂಪರೇಷೆಗಳನ್ನು ನಿರುಪಿಸಲು ಬೆಳಗಾವಿಯ ಮಹಾಂತೇಶ ನಗರದ ಹೊಟೆಲ್ ಇಕಮ ನಲ್ಲಿ ರೈತಪರ ಸಂಘಗಳ ಸಹಭಾಗಿತ್ವದಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು.
* ಕರ್ನಾಟಕ ಸರ್ಕಾರದ ಭೂಸುಧಾರಣಾ ಕಾಯ್ದೆ ತಿದ್ದುಪಡಿ *ಕೇಂದ್ರ ಸರ್ಕಾರದ ಎಪಿಎಂಸಿ ಖಾಸಗೀಕರಣ * ವಿದ್ಯುತ್ ತಿದ್ದುಪಡಿಯಂತಹ ಹಲವಾರು ತಿದ್ದುಪಡಿಗಳು ರೈತರಿಗೆ ಮಾರಕವಷ್ಟೆ ಅಲ್ಲಾ ಜೀವಂತ ಸಮಾಧಿ ಕಟ್ಟಿದಂತಾಗಿದೆ ಎಂದು ಸಭೆಯಲ್ಲಿ ಕಳವಳ ವ್ಯಕ್ತ ಪಡಿಸಲಾಯಿತು.ಅದಕ್ಕಾಗಿ ಇಂತಹ ಜನವಿರೋಧಿ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸುವುದು ಮತ್ತು ಹಿಂಪಡೆಯವರೆಗೆ ಹೋರಾಟ ರೂಪಿಸುವುದು ಸೇರಿದಂತೆ ಹಲವಾರು ನಿರ್ಣಾಯಗಳನ್ನು ತೆಗೆದುಕೊಳ್ಳಲಾಯಿತು.
ನಂತರ ಇದು ಸಮಸ್ತ ರೈತರ ಮರಣ ಶಾಸಣ ಬರೆದು ಶೇಕಡಾ 5% ರಷ್ಟರಿರುವ ಕಾರ್ಫೋರೇಟ ಸಂಸ್ಥೆಗಳಿಗೆ ಕೆಂಪು ಹಾಸಿಗೆಕರೆಯಲಾಗಿದೆ.ಅದಕ್ಕಾಗಿ ಈ ವ್ಯವಸ್ಥೆ ವಿರುದ್ದ ಹೋರಾಡಲು ಪ್ರಬಲ ಶಕ್ತಿಯಾಗಲು ರೈತಪರ ಸಂಘಟನೆಗಳು ಒಂದೆ ವೇದಿಕೆಯ ಮೇಲೆ ಪ್ರತಿಭಟಿಸಲು ಚಿಂತಿಸಲಾಯಿತು.
ಬರುವ ಗುರುವಾರ ದಿನಾಂಕ 20/8/2020 ರಂದು ಮತ್ತೆ ಎಲ್ಲರನ್ನೂ ಳಂಗೊಂಡು ಮತ್ತೊಂದು ಸುತ್ತಿನ ಸಭೆಯಲ್ಲಿ ಚರ್ಚಿಸಿ ಹೋರಾಟ ರೂಪ ರೇಷ ತಯಾರಿಸಲು ತಿರ್ಮಾನಿಸಿ ಸಭೆಯನ್ನು ಮುಂದೊಡಲಾಯಿತು.
ಇಲ್ಲು ವಿಶೇಷವೆಂದರೆ ಆಡಳಿತ ಪಕ್ಷಗಳು ಸಮ್ಮತಿ ಸೂಚಿಸುವುದು ಅನಿವಾರ್ಯ ಆದರೆ ವಿರೋಧ ಪಕ್ಷಗಳು ಯಾವುದೆ ಅಭಿಪ್ರಾಯ ವ್ಯಕ್ತಪಡಿಸದೆ ಮೌನವಹಿಸುವ ಮೂಲಕ ಸಮ್ಮತಿ ಸೂಚಿಸುತ್ತಿರುವುದು ಸೋಜಿಗವೆನಿಸಿದೆ.ಅದಕ್ಕಾಗಿ ರೈತರ ಸಮಸ್ಯೆಗಳನ್ನು ನಾವೆ ಬಗೆಹರೆಸಿಕೊಳ್ಳಲು ನಾವೆಲ್ಲಾ ಒಂದಾಗುವುದು ಅನಿವಾರ್ಯವಾಗಿದೆ.ದಯವಿಟ್ಟು ಬರುವ 20 ನೆ ತಾರೀಖಿನಂದು ರೈತಪರ ಹಾಗು ವಿವಿಧ ಸಂಘ ಸಂಸ್ಥೆಗಳು ಭಾಗವಹಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಭಾಗವಹಿಸಲು ಈ ಸಭೆಯ ಮುಖಾಂತರ ವಿನಂತಿಸಿಕೊಳ್ಳಲಾಯಿತು.

ಸಭೆಯ ಪ್ರಾರಂಭದಲ್ಲಿ ಇತ್ತೀಚೆಗೆ ನಿಧನರಾದ ಶ್ರೀ ಜೀವಪ್ಪಾ ಧರೆಣ್ಣವರ ಜಿಲ್ಲಾಧ್ಯಕ್ಷರು ಭಾರತೀಯ ಕೃಷಿಕ ಸಮಾಜ (ಸಂ) ಹಾಗೂ ಮಾಜಿ ಸೈನಿಕರು ಮತ್ತು ಬೆಳಗಾವಿಯ ಹಿರಿಯ ನ್ಯಾಯವಾದಿಗಳಾದ ಶ್ರೀ ಎ ಜಿ ಮುಳವಾಡಮಠ ರವರ ಶ್ರದ್ಧಾಂಜಲಿ ಅರ್ಪಿಸಲಾಯಿತು
ಸಭೆಯನ್ನು ಬೆಳಗಾವಿಯ ಮಹಾಂತೇಶ ನಗರದ “ಹೊಟೆಲ್ ಇಕಮ”ನಲ್ಲಿ ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಶ್ರೀ ಸಿದಗೌಡ ಮೋದಗಿ,ರಾಜ್ಯಾಧ್ಯಕ್ಷರು ಭಾರತೀಯ ಕೃಷಿಕ ಸಮಾಜ (ಸಂ) ವಹಿಸಿದ್ದರು.ಶ್ರೀ ಬಿ ಎಂ ಚಿಕ್ಕನಗೌಡರ, ಸಮಸ್ತ ಲಿಂಗಾಯತ ವೇದಿಕೆ ,ಶ್ರೀ ವಿಜಯ ಕುಲಕರ್ಣಿ ಕಳಸಾ- ಬಂಡೋರಾ ಹೋರಾಟಗಾರರು,ಶ್ರೀ ಮತಿ ಮೀರಾ ಬೀರಣ್ಣವರ ಮಹಿಳಾ ರಾಜ್ಯಾಧ್ಯಕ್ಷರು ಭಾ,ಕೃ,ಸ (ಸಂ) ಹುಬ್ಬಳ್ಳಿ. ಶ್ರೀ ಮತಿ ಶಕುಂತಲಾ ತೇಲಿ ಮಹಿಳಾ ರಾಜ್ಯ ಉಪಾಧ್ಯಕ್ಷ ರು ಭಾ,ಕೃ,ಸ (ಸಂ) ಶ್ರೀ ವಿಶ್ವೇಶ್ವರಯ್ಯ ಹಿರೇಮಠ ಗ್ರಾಮೀಣ ಕೂಲಿ ಕಾರ್ಮಿಕರ ಜಿಲ್ಲಾ ಸಂಘಟನೆ. ಶ್ರೀ ಬಾಳಾಸಾಹೇಬ ಉದಗಟ್ಟಿ ರಾಜ್ಯ ಉಪಾಧ್ಯಕ್ಷ ರು.ಶ್ರೀ ಪೀರಜಾದೆ ರಾಜ್ಯ ನಿರ್ದೇಶಕರು.ಶ್ರೀ ಅರ್ಜುನ ಗಾವಡಾ ಖಾನಾಪುರ ತಾಲೂಕಾ ಅಧ್ಯಕ್ಷರು, ಕಾರವಾರ ಜಿಲ್ಲೆಯ ಭಾ,ಕೃ,ಸ ( ಸಂ) ಪದಾಧಿಕಾರಿಗಳು ಭಗವಹಿಸಿದ್ದರು.

LEAVE A REPLY

Please enter your comment!
Please enter your name here