ಸರ್ಕಾರ ಯಾವಾಗ ಇರುತ್ತೋ.? ಹೋಗುತ್ತೋ.? ಗೊತ್ತಿಲ್ಲ: ಅಚ್ಚರಿ ಹೇಳಿಕೆ ನೀಡಿದ ಸಚಿವ ಆನಂದ್ ಸಿಂಗ್

0

ಈ ಸರ್ಕಾರಗಳು ಯಾವಾಗ ಇರುತ್ತವೆ? ಯಾವಾಗ ಹೋಗುತ್ತವೆ? ಗೊತ್ತಿಲ್ಲ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಮಾತನಾಡಿದ ಅವರು, ಸರ್ಕಾರ ಇರುತ್ತೋ ಹೋಗುತ್ತೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ನನ್ನ ಹೇಳಿಕೆಯನ್ನು ಅನ್ಯತಾ ಭಾವಿಸಬಾರದು ಎಂದು ಸ್ಪಷ್ಟನೆ ನೀಡಿದ ಅವರು, ವನ್ಯಜೀವಿ ಸಂರಕ್ಷಣಾ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಬೆಂಗಳೂರಿನಲ್ಲಿ ಕಾರ್ಯಕ್ರಮವಿದ್ದು ಸಚಿವನಾಗಿ ನಾನು ಭಾಗವಹಿಸಬೇಕಿತ್ತು. ಆದರೆ ನನ್ನದೇ ಮತಕ್ಷೇತ್ರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೆಲವರು ಸಲಹೆ ನೀಡಿದ್ದರಿಂದ ಇಲ್ಲೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ.

ಸಣ್ಣ ಕಾರ್ಯಕ್ರಮವಾಗಿರಲಿ ದೊಡ್ಡ ಕಾರ್ಯಕ್ರಮವಾಗಿರಲಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕು. ಏಕೆಂದರೆ ಸರ್ಕಾರಗಳು ಯಾವಾಗ ಇರುತ್ತವೆಯೋ ಯಾವಾಗ ಹೋಗುತ್ತವೆ ಎನ್ನುವುದು ಗೊತ್ತಿಲ್ಲ. ಈ ಸರ್ಕಾರ ಮೂರು ವರ್ಷ ಇರುತ್ತದೆ. ಇದರ ಬಗ್ಗೆ ಯಾವುದೇ ಸಂಶಯ ಬೇಡವೆಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here