ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶ ಚತುರ್ಥಿ ಸಂಭ್ರಮ: ಕುಟುಂಬದ ಜೊತೆ ಸಲ್ಮಾನ್ ಹಬ್ಬ ಆಚರಣೆ

0

ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಜೋರಾಗಿತ್ತು. ಗಣೇಶ ಹಬ್ಬವನ್ನು ಬಾಲಿವುಡ್ ಮಂದಿ ಜೋರಾಗಿ ಆಚರಿಸುತ್ತಾರೆ. ಆದರೆ ಈ ಬಾರಿ ಕೊರೊನಾ ವೈರಸ್ ಹಾವಳಿಯ ಪರಿಣಾಮ ಅದ್ದೂರಿ ಗಣೇಶೋತ್ಸವಕ್ಕೆ ಬ್ರೇಕ್ ಬಿದ್ದಿದೆ. ಅದ್ದೂರಿ ಸಂಭ್ರಮ ವಿಲ್ಲದಿದ್ದರೂ ಮನೆಯಲ್ಲಿಯೇ ಗಣೇಶನನ್ನು ಕೂರಿಸಿ ಪೂಜೆ ಮಾಡಿ ಖುಷಿ ಪಟ್ಟಿದ್ದಾರೆ.

ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶ ಹಬ್ಬವನ್ನು ಪ್ರತೀ ವರ್ಷ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಭಾವೈಕ್ಯತೆಯ ಸಂಕೇತವಾಗಿ ಗಣೇಶ ಪೂಜೆಯನ್ನು ಹಲವಾರು ವರ್ಷಗಳಿಂದ ತಪ್ಪದೆ ಮಾಡಿಕೊಂಡು ಬಂದಿದ್ದಾರೆ. ಗಣೇಶ ಪೂಜೆ, ಗಣೇಶನನ್ನು ಬೀಳ್ಕೊಡುವುದು ಎಲ್ಲಾ ಸಂಭ್ರಮ ಮುಗಿಲು ಮುಟ್ಟುವಂತೆ ಮಾಡುತ್ತಿದ್ದರು.

 

ಸಲ್ಮಾನ್ ಮನೆಯವರು ಮಾತ್ರವಲ್ಲದೆ, ಇಡೀ ಬಾಲಿವುಡ್ ಸಲ್ಮಾನ್ ಮನೆಯ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಿತ್ತು. ಆದರೆ ಈ ಬಾರಿ ಎಲ್ಲಾ ಆಚರಣೆ ಮಿಸ್ ಆಗಿದೆ. ಆದರೂ ಗಣೇಶನನ್ನು ಮನೆಗೆ ತಂದು ಕುಟುಂಬದವರೆಲ್ಲರೂ ಪೂಜೆ ಮಾಡಿ ಸರಳವಾಗಿ ಹಬ್ಬ ಆಚರಿಸಿದ್ದಾರೆ.

ಪೂಜೆಯಲ್ಲಿ ನಟ ಸಲ್ಮಾನ್ ತಂದೆ ಮತ್ತು ತಾಯಿ ಹಾಗೂ ಇಬ್ಬರು ಸಹೋದರರು ಜೊತೆಗೆ ಸಹೋದರಿ ಅರ್ಪಿತಾ ದಂಪತಿ ಹಾಗೂ ಆಪ್ತರು ಪೂಜೆಯಲ್ಲಿ ಭಾಗಿಯಾಗಿದ್ದರು. ಸಲ್ಲು ಮನೆಯ ಗಣೇಶ ಹಬ್ಬದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಲ್ಮಾನ್ ಖಾನ್ ರಕ್ಷಾಬಂಧನ ಹಬ್ಬವನ್ನು ಆಚರಣೆ ಮಾಡುತ್ತಾರೆ. ಪ್ರೀತಿಯ ಸಹೋದರಿ ಅರ್ಪಿತಾ, ಸಲ್ಮಾನ್ ಖಾನ್ ಗೆ ರಾಕಿ ಕಟ್ಟಿ ಸಂಭ್ರಮಿಸುತ್ತಾರೆ. ಕೆಲವು ಹಿಂದೂ ಹಬ್ಬಗಳನ್ನು ಸಲ್ಮಾನ್ ಖಾನ್ ಮನೆಯಲ್ಲಿ ಖುಷಿಯಿಂದ ಆಚರಣೆ ಮಾಡುತ್ತಾರೆ.

LEAVE A REPLY

Please enter your comment!
Please enter your name here