ಸಾಬೂನಿನಲ್ಲಿ ಸಿಕ್ತು 38 ಲಕ್ಷ ಮೌಲ್ಯದ ಚಿನ್ನ..!

0

ಚಿನ್ನ, ಡ್ರಗ್ಸ್ ಇತ್ಯಾದಿಗಳನ್ನು ಸಾಗಿಸಲು ಜನರು ಅನೇಕ ದಾರಿ ಹುಡುಕುತ್ತಾರೆ. ಗುದದ್ವಾರ, ಒಳ ಉಡುಪು, ಹೊಟ್ಟೆ, ತೊಡೆ ಹೀಗೆ ಅಡಗಿಸಿಟ್ಟುಕೊಂಡು ಸಾಗಿಸುತ್ತಾರೆ. ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಸಾಬೂನಿನಲ್ಲಿ ಅಡಗಿಸಿಟ್ಟ 38 ಲಕ್ಷ ರೂ. ಬೆಲೆಬಾಳುವ ಚಿನ್ನ ಪತ್ತೆಯಾಗಿದೆ.

ಒಂದು ಕಾಲದಲ್ಲಿ ಲಕ್ಸ್ ಸಂಸ್ಥೆಯು ಲಕ್ಸ್ ಗೋಲ್ಡ್ ಎಂಬ ಸಾಬೂನು ಪರಿಚಯಿಸಿತ್ತು. ಸೋಪಿನೊಳಗೆ ಚಿನ್ನದ ಬಿಲ್ಲೆ ಅಡಗಿಸಿಡಲಾಗಿರುತ್ತಿತ್ತು. ಅದೃಷ್ಟ ಇದ್ದ ಬಳಕೆದಾರರಿಗೆ ಸಾಬೂನಿನಲ್ಲಿ ಚಿನ್ನದ ಬಿಲ್ಲೆ ಸಿಗುತ್ತಿತ್ತು. ಇದುವರೆಗೆ ಅದೆಷ್ಟು ಜನರಿಗೆ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ.

ಆದರೆ, ಇಲ್ಲಿನ ಪೊಲೀಸರಿಗೆ ಮಾತ್ರ ಸಿಕ್ಕಿತ್ತು. ಚಿನ್ನ ಸಾಗಿಸುತ್ತಿದ್ದವನನ್ನು ಅನುಮಾನದ ಮೇಲೆ ತಪಾಸಣೆಗೆ ಒಳಪಡಿಸಿದಾಗ ಸಾಕಷ್ಟು ಸಾಬೂನು ಸಿಕ್ಕಿದೆ. ಇಷ್ಟೊಂದು ಸಾಬೂನು ಎಲ್ಲಿಗೆ ಒಯ್ಯುತ್ತಿರಬಹುದು ಎಂದು ವಿಚಾರಣೆಗೆ ಒಳಪಡಿಸಿ, ಬಿಚ್ಚಿ ನೋಡಿದರೆ ಅದರಲ್ಲಿ ಚಿನ್ನ ಸಿಕ್ಕಿದೆ.

LEAVE A REPLY

Please enter your comment!
Please enter your name here