ಸಾಮಾಜಿಕ ಪಿಡುಗುಗಳಿಗೆ ಬೇಸತ್ತು ಬಾಲಕಿ ಆತ್ಮಹತ್ಯೆ

0

ಮಾಲಿನ್ಯ ಮತ್ತು ಭ್ರಷ್ಟಾಚಾರದಂತಹ ಸಾಮಾಜಿಕ ದುಷ್ಕೃತ್ಯಗಳು ಹೆಚ್ಚುತ್ತಿರುವುದರಿಂದ ಬೇಸರಗೊಂಡ 16 ರ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಆತ್ಮಹತ್ಯೆ ಪತ್ರ ಬರೆದ ನಂತರ ಆಕೆ ತಲೆಗೆ ಗುಂಡು ಹಾರಿಸಿಕೊಂಡು ಸಾವಿಗೀಡಾಗಿದ್ದಾಳೆ.
ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ಈ ದುರಂತ ಸಂಭವಿಸಿದೆ. ಬಾಲಕಿ ಬಾಬ್ರಲಾದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. ಅವಳು 18 ಪುಟಗಳ ಆತ್ಮಹತ್ಯೆ ಪತ್ರ ಬರೆದಿಟ್ಟಿದ್ದು, ಅದರಲ್ಲಿ ಅವಳು ಪ್ರಧಾನಿ ಮೋದಿಯವರನ್ನು ಭೇಟಿಯಾಗುವ ಆಶಯ ವ್ಯಕ್ತಪಡಿಸಿದ್ದಳು.
ಪರಿಸರ ಮಾಲಿನ್ಯ, ಭ್ರಷ್ಟಾಚಾರ ಮತ್ತು ಅರಣ್ಯನಾಶದ ಬಗ್ಗೆ ಆಕೆ ಕಳವಳ ವ್ಯಕ್ತಪಡಿಸಿದ್ದಳು. ಹೆಚ್ಚುತ್ತಿರುವ ಸಾಮಾಜಿಕ ದುಷ್ಕೃತ್ಯಗಳಿಂದಾಗಿ ತಾನು ತೊಂದರೆಗೀಡಾಗಿದ್ದೇನೆ ಎಂದು ಹುಡುಗಿ ಹೇಳಿಕೊಂಡಿದ್ದಾಳೆ. ಪಿಎಂ ಮೋದಿ ಅವರೊಂದಿಗೆ ಈ ಎಲ್ಲ ವಿಷಯಗಳನ್ನು ಚರ್ಚಿಸಲು ಬಯಸಿದ್ದಾಗಿ ಹುಡುಗಿ ಉಲ್ಲೇಖಿಸಿದ್ದಾಳೆ.

ಜನಸಂಖ್ಯೆಯ ನಿಯಂತ್ರಣ, ದೀಪಾವಳಿಯಲ್ಲಿ ಸ್ಫೋಟಕಗಳ ನಿಷೇಧ, ಹೋಳಿ ಹಬ್ಬದಲ್ಲಿ ಬಳಸುವ ರಾಸಾಯನಿಕ ಆಧಾರಿತ ಬಣ್ಣಗಳ ಮೇಲೂ ನಿಷೇಧ ಹೇರಬೇಕೆಂದು ಆಕೆ ಒತ್ತಾಯಿಸಿದ್ದಾಳೆ.
ದೇಶದ ವೃದ್ಧರಿಗೆ ನೀಡಲಾಗುವ ಚಿಕಿತ್ಸೆಯ ಬಗ್ಗೆ ಹುಡುಗಿ ಕಳವಳ ವ್ಯಕ್ತಪಡಿಸಿದ್ದು, ‘ಮಕ್ಕಳು ತಮ್ಮ ಹೆತ್ತವರನ್ನು ವೃದ್ಧಾಶ್ರಮಗಳಿಗೆ ಕಳುಹಿಸುವ ಈ ಜಗತ್ತಿನಲ್ಲಿ ನಾನು ಇನ್ನು ಮುಂದೆ ವಾಸಿಸಲು ಬಯಸುವುದಿಲ್ಲ’ ಎಂದು ಬರೆದಿದ್ದಾಳೆ.
ಗುನ್ನೌರ್‌ನ ಠಾಣಾಧಿಕಾರಿ ದೇವೇಂದ್ರ ಕುಮಾರ್, ‘ಆಗಸ್ಟ್ 14 ರಂದು ರಾತ್ರಿ ಸ್ವತಃ ಗುಂಡು ಹಾರಿಸಿಕೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಿವಾಲ್ವರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.’
ಪ್ರಕರಣದ ನಂತರ ಪೊಲೀಸರು ತನಿಖೆ ಆರಂಭಿಸಿ ಬಾಲಕಿ ಬರೆದ ಆತ್ಮಹತ್ಯೆ ಪತ್ರವನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ. ಬಾಲಕಿ ಮಾನಸಿಕ ಚಿಕಿತ್ಸೆಗೆ ಒಳಗಾಗಿದ್ದಾಳೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here