ಸಾಯುವ ಮುನ್ನ ಗೂಗಲ್ ನಲ್ಲಿ ಸುಶಾಂತ್ ಸಿಂಗ್ ಸರ್ಚ್ ಮಾಡಿದ್ದೇನು.?

0

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು 50 ದಿನಗಳು ಕಳೆದಿವೆ. ಆದ್ರೆ ಸುಶಾಂತ್ ಆತ್ಮಹತ್ಯೆ ಸುದ್ದಿಯಲ್ಲಿದೆ. ಸುಶಾಂತ್ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ಸೋಮವಾರ ಮುಂಬೈ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್, ಸುಶಾಂತ್ ಆತ್ಮಹತ್ಯೆಗೆ ಮುನ್ನ ಗೂಗಲ್‌ನಲ್ಲಿ ಹಲವು ವಿಷಯಗಳನ್ನು ಹುಡುಕಿದ್ದಾರೆ ಎಂದು ಹೇಳಿದ್ದಾರೆ.

ಗೂಗಲ್ ನಲ್ಲಿ ಸುಶಾಂತ್ ಬೈಪೋಲಾರ್ ಡಿಸಾರ್ಡರ್, ಸ್ಕಿಜೋಫ್ರೇನಿಯಾ, ನೋವುರಹಿತ ಸಾವು ಮತ್ತು ತನ್ನ ಹೆಸರನ್ನು ಹುಡುಕಿದ್ದಾರಂತೆ. ಬೈಪೋಲಾರ್ ಡಿಸಾರ್ಡರ್ ಮತ್ತು ಸ್ಕಿಜೋಫ್ರೇನಿಯಾವು ಗಂಭೀರ ಮಾನಸಿಕ ಕಾಯಿಲೆಗಳಾಗಿವೆ. ಈ ಕಾಯಿಲೆಗಳು ಮಾರಕ ಫಲಿತಾಂಶ ನೀಡುತ್ತವೆ.

ದಿಶಾ ಸಾಲಿಯನ್ ಪ್ರಕರಣದಲ್ಲಿ ಸುಶಾಂತ್ ಹೆಸರು ಕೇಳಿ ಬಂದಾಗ ಸುಶಾಂತ್ ಹೆಚ್ಚು ಚಿಂತೆಗೀಡಾಗಿದ್ದರಂತೆ. ದಿಶಾ ವಕೀಲರಿಗೆ ಮೆಸ್ಸೇಜ್ ಮಾಡಿದ್ದರಂತೆ. ಸಾಯುವ ಮೊದಲು ಗೂಗಲ್ನಲ್ಲಿ ಸುಶಾಂತ್ ಮೇಲಿನ ವಿಷ್ಯವನ್ನು ಸರ್ಚ್ ಮಾಡಿದ್ದಾರೆ. ಇದು ಗೂಗಲ್ ಹಿಸ್ಟ್ರಿಯಲ್ಲಿ ಸಿಕ್ಕಿದೆ ಎಂದು ಆಯುಕ್ತರು ಹೇಳಿದ್ದಾರೆ.

LEAVE A REPLY

Please enter your comment!
Please enter your name here