ಸಾವಳಗಿ ದಕ್ಷ ಅಧಿಕಾರಿ ಮರಳಿ ಗೂಡಿಗೆ ಸಾವಳಗಿ ಪಂಚಾಯತಗೆ ಪಿಡಿಓ ಕಡಕೋಳ ಅಧಿಕಾರ ಸ್ವೀಕಾರ

0

ಸಾವಳಗಿ ದಕ್ಷ ಅಧಿಕಾರಿ ಮರಳಿ ಗೂಡಿಗೆ

ಸಾವಳಗಿ ಪಂಚಾಯತಗೆ ಪಿಡಿಓ ಕಡಕೋಳ ಅಧಿಕಾರ ಸ್ವೀಕಾರ

ಸರ್ಕಾರಕ್ಕೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದ ಸಾವಳಗಿ ಗ್ರಾಮಸ್ಥರು

ಸಾವಳಗಿ : ಕಳೆದ ಒಂದು ತಿಂಗಳ ಹಿಂದೆ ವರ್ಗಾವಣೆಗೊಂಡ ಪಿಡಿಓ ಗಿರೀಶ ಕಡಕೋಳ ಅವರನ್ನು ಗ್ರಾಮೀಣ ಮತ್ತು ಪಂಚಾಯತ ರಾಜ ಇಲಾಖೆಯ ಸರ್ಕಾರ ಅಧಿನ ಕಾರ್ಯದರ್ಶಿ ಅವರ ಆದೇಶದನ್ವಯ ಮತ್ತೆ ಸಾವಳಗಿ ಪಂಚಾಯತಗೆ ಗುರುವಾರ ಅಧಿಕಾರ ಸ್ವೀಕಾರ ಮಾಡಿಕೊಂಡರು.

ಕಳೆದ 3 ವರ್ಷಗಳಿಂದ ಗ್ರಾಮಸ್ಥರ ಸಹಕಾರದೊಂದಿಗೆ ಗ್ರಾಮ ಅಭಿವೃದ್ದಿಗೆ ಉತ್ತಮ ಆಡಳಿತ ನಡೆಸಿಕೊಂಡು ಬಂದ ಪಿಡಿಓ ಗಿರೀಶ ಕಡಕೋಳ ಅವರ ವರ್ಗಾವಣೆಯಿಂದ ಸಾವಳಗಿಯಲ್ಲಿನ ಜನತೆಗೆ ಬಹಳ ಬೇಸರ ತಂದಿತ್ತು. ಈ ಹಿನ್ನೆಲೆಯಲ್ಲಿ ಪಂಚಾಯತ ರಾಜ ಸಚಿವರು ಹಾಗು ಅಪರ ಆಯುಕ್ತರಿಗೆ ಗ್ರಾಮದ ಪ್ರಮುಖರು ಖುದ್ದಾಗಿ ಭೇಟಿ ನೀಡಿ ಉತ್ತಮ ಅಧಿಕಾರಿ ಗಿರೀಶ ಕಡಕೋಳ ಅವರನ್ನೆ ನೇಮಕ ಮಾಡಬೇಕೆಂಬ ಬೇಡಿಕೆಗೆ ಸರ್ಕಾರ ಸ್ಪಂದಿಸಿ ವರ್ಗಾವಣೆ ಮಾಡಿದೆ.
ಸಾವಳಗಿ ಗ್ರಾಮದಲ್ಲಿ ಬದು ನಿರ್ಮಾಣ, ಕುಡಿಯುವ ನೀರಿನ ಘಟಕ, ಸಿಸಿ ರಸ್ತೆ, ಚರಂಡಿ, ಶಾಲಾ ಅಭಿವೃದ್ದಿ, ಬಸ ನಿಲ್ದಾಣ, ಶೌಚಾಲಯ, ಆಸನಗಳ ವ್ಯವಸ್ಥೆ, ಮಾದರಿ ಕೋರೊನಾ ಕ್ವಾರೆಂಟೈನ, ಕೊರೊನಾ ವಿರುದ್ಧ ಪ್ರಾಮಾಣಿಕ ಹೋರಾಟ, ಮಾದರಿ ಮತಗಟ್ಟೆ ಹಾಗು ಪ್ರವಾಹ ಸಂತ್ರಸ್ತರ ಸಹಾಯ ಸೇರಿದಂತೆ ಹಲವಾರು ಅಬಿವೃದ್ದಿ ಕೆಲಸಗಳನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇಂತಹ ಒಳ್ಳೆಯ ಪ್ರಾಮಾಣಿಕ ಅಧಿಕಾರಿ ಮರಳಿ ಸಾವಳಗಿ ಪಂಚಾಯತಗೆ ವರ್ಗಾವಣೆಯಾಗಿ ಬಂದಿರುವದು ಗ್ರಾಮಸ್ಥರ ಹರ್ಷಕ್ಕೆ ಕಾರಣವಾಗಿದೆ.
ಬಾಕ್ಸ : 1) : ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಗ್ರಾಮ ಪಂಚಾಯತಗಳಲ್ಲಿ ಸಾವಳಗಿಯು ಕೂಡಾ ಒಂದು, ಇಂತಹದರಲ್ಲಿ ಹಗಲು ರಾತ್ರಿ ಎನ್ನದೆ ನಿತ್ಯ ಸಾರ್ವಜನೀಕರಿಗೆ ಪ್ರಾಮಾಣಿಕ ಕೆಲಸ ಮಾಡಿರುವ ಗಿರಿಶ ಕಡಕೋಳ ಅವರು ಮತ್ತೆ ಸಾವಳಗಿಗೆ ಬಂದಿರುವದು ಸಂತಸದ ಸಂಗತಿ. : ಬಸವರಾಜ ಪರಮಗೊಂಡ : ಪಿಕೆಪಿಎಸ್ ನಿರ್ದೇಶಕರು ಸಾವಳಗಿ.
ಬಾಕ್ಸ : 2) : ನನ್ನ 3 ವರ್ಷದ ಅವಧಿಯಲ್ಲಿ ಸಾವಳಗಿಯ ಜನತೆ ಬಹಳ ಸಹಕಾರ ನೀಡಿ ಅಭಿವೃದ್ದಿಗೆ ಕೈಜೋಡಿಸಿದ್ದಾರೆ. ಮತ್ತೆ ನಮ್ಮ ಮೇಲಾಧಿಕಾರಿಗಳ ಆದೇಶದಂತೆ ಸಾವಳಗಿ ಪಂಚಾಯತಗೆ ಹಾಜರಾಗಿದ್ದೆನೆ. ಇನ್ನು ಹೋಸ ಹೋಸ ಯೋಜನೆಗಳನ್ನು ಮಾಡುತ್ತಾ ಸಾವಳಗಿ ಗ್ರಾಮವು ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಲಸ ನಿರ್ವಹಿಸುತ್ತೆನೆ. : ಗಿರೀಶ ಕಡಕೋಳ : ಪಿಡಿಓ ಸಾವಳಗಿ.
ಪೋಟೊ ವಿವರ : ಗಿರೀಶ ಕಡಕೋಳ ಭಾವಚಿತ್ರ.

LEAVE A REPLY

Please enter your comment!
Please enter your name here