ಸಾವಳಗಿ ಪೋಲಿಸರಿಂದ ಮುಂದುವರೆದ ಕಾರ್ಯಾಚರನೆ

0

ಸಾವಳಗಿ ಪೋಲಿಸರಿಂದ ಮುಂದುವರೆದ ಕಾರ್ಯಾಚರನೆ
ಸಾವಳಗಿ : ಕಳೆದ ಎರಡು ದಿನಗಳ ಹಿಂದೆ 60 ಸಾವಿರ ಮೌಲ್ಯದ ಗಾಂಜಾ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿರುವ ಬೆನ್ನಲ್ಲಿಯೇ ಸಾವಳಗಿ ಪೋಲಿಸರು ಕಾರ್ಯಾಚರನೆಯನ್ನು ಮುಂದುವರೆಸಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮತ್ತೆ ಇಬ್ಬರನ್ನು ಗಾಂಜಾ ಸಮೇತ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಡಿಹುಡಿ ಗ್ರಾಮದ ಅಮಸಿದ್ದ ಗುರಪ್ಪ ಜೈನಾಪೂರ ಎಂಬ ವ್ಯಕ್ತಿ ಹಿರೇಪಡಸಲಗಿ ಗ್ರಾಮದ ಸರಹದ್ದಿನಲ್ಲಿ ಅಂದಾಜು ಐದು ಸಾವಿರ ಮೌಲ್ಯದ ಅರ್ಧ ಕೆ.ಜಿ. ಗಾಂಜಾ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವನನ್ನು ಬಂದಿಸಿ ಅಕ್ರಮ ಗಾಂಜಾ ವಶಪಡಿಸಿಕೊಂಡಿದ್ದಾರೆ. ಇದೇ ರೀತಿ ಇನ್ನೊರ್ವ ವ್ಯಕ್ತಿ ನಾಗನೂರ ಗ್ರಾಮದ ಸಾಗರ ಶ್ರವಣ ಹರಿಜನ (ಜಂಬಗಿ) ಎಂಬ ವ್ಯಕ್ತಿ 5500 ಮೌಲ್ಯದ ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಸಾವಳಗಿ ಪೋಲಿಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಹೀಗೆ ಸಾವಳಗಿ ಠಾಣೆಯ ಪೋಲಿಸರು ಅಕ್ರಮ ಗಾಂಜಾ ಪ್ರಕರಣದ ಕಾರ್ಯಾಚರನೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ಧೇಶಕರಾದ ಅಭಯಕುಮಾರ ಮೊರಭ. ಸಾವಳಗಿ ಠಾಣೆಯ ಪಿ.ಎಸ್.ಐ. ಶೇಖರ ಎಸ್ ಘಾಟಗೆ, ಸಿಬ್ಬಂದಿಗಳಾದ ಎಸ್.ಎಸ್.ಬಿಳಗಿ, ಆರ್.ಎಸ್.ಬಸಣ್ಣವರ, ಎ.ಎ.ಬೈಗನಪಲ್ಲಿ, ಡಿ.ವ್ಹಿ.ಕುಂಬಾರ, ಎಸ್.ಎಸ್.ಹಳ್ಯಾಳ, ಎಮ್.ಎಸ್.ಕಾರಜೋಳ, ಎಮ್.ಸಿ.ಕುಡಗಿ, ಆರ್.ಎಸ್.ತಳವಾರ, ವಾಯ್.ಎಸ್.ಸನದಿ, ಪರಶುರಾಮ ಮಾಳಿ, ಲೆಕ್ಕಾಧಿಕಾರಿಗಳಾದ ಈಶ್ವರ ಹೊಸಲಕರ ಹಾಗು ಮುತ್ತಪ್ಪ ಜಂಗಮಶೆಟ್ಟಿ ಇದ್ದರು.
ಪೋಟೊ ವಿವರ : ಅಕ್ರಮ ಗಾಂಜಾ ಮಾರಾಟ ಮಾಡುತ್ತಿರುವ ವ್ಯಕ್ತಿಯನ್ನು ಸಾವಳಗಿ ಠಾಣೆಯ ಪೋಲಿಸರು ಬಂದಿಸಿದ್ದಾರೆ.

LEAVE A REPLY

Please enter your comment!
Please enter your name here