ಸಾವಿನಲ್ಲೂ ಬಿಡದ ತಂದೆ ಮಗನ ನಡುವಿನ ಬಾಂಧವ್ಯ

0

ಅಥಣಿ ವರದಿ 

ಆಧುನಿಕ ಜಗತ್ತಿನಲ್ಲಿ ಗುರು -ಹಿರಿಯರಿಗೆ ಗೌರವ ಕೊಡುವ ಪರಂಪರೆ ನಶಿಸಿ ಹೋಗುತ್ತಿದೆ . ತಂದೆ ಮಕ್ಕಳ ನಡುವೆ ಸಾಮರಸ್ಯತೆಯೂ ಸಂಪೂರ್ಣ ನಶಿಸಿ ಹೋಗಿ ಮನೆಗಳು ಕುರುಕ್ಷೇತ್ರಗಳಾಗುತ್ತಿವೆ . 

ಇವೆಲ್ಲವುಗಳ ಮದ್ಯದಲ್ಲಿ ಶ್ರವಣಕುಮಾರನ ಪಿತೃಭಕ್ತಿ ಇಂದಿನ ಜನಾಂಗಕ್ಕೆ ಡಾಂಬಿಕವೆನಿಸುತ್ತಲಿರುವುದು ಸಹಜ . 

ಆದರೆ ಅಥಣಿ ತಾಲೂಕಿನ ನಾಗನೂರ ಪಿಕೆ ಗ್ರಾಮದ ಮುಸ್ಲಿಂ ಸಮಾಜದ ಕರಿಮಸಾಬ ಬಾಬಾಲಾಲ ಕಾಸಾರ ಹಾಗೂ ಮಗ ಗೌಸ್  ಕಾಸಾರ ಈ ತಂದೆ

ಮಗನ ನಡುವಿನ ಬಾಂಧವ್ಯವು ಆಧುನಿಕ ಯುವಕರಿಗೆ ಮಾದರಿಯಾಗಿದೆ , 

ರವಿವಾರ ದಿ . 15 ರಂದು ಕರಿಮಸಾಬ ಕಾಸಾರ ( 72 ) ವರ್ಷ ವಯಸ್ಸಾಗಿದ್ದು , ಆತ ಮರಣ ಹೊಂದಿದ್ದಾನೆ . ತಂದೆಯ ಮರಣವು ಮಗನಿಗೆ ಭರಿಸಲಾರದ ದುಖಃವನ್ನು ಉಂಟು ಮಾಡಿದ್ದು ತಂದೆಯ ಮರಣದ ಸುದ್ದಿ ತಿಳಿಯುತ್ತಿದ್ದಂತೆ ಮಗ ಹೃದಯಾ ಘಾತದಿಂದ ಸಾವನ್ನಪ್ಪಿದ್ದಾನೆ – ಕಿತ್ತು ತಿನ್ನುವ ಬಡತನ , ಹೆಂಡಿರು ಮಕ್ಕಳನ್ನು ಸಲುಹಲು ದುಡಿಮೆಯ ಈತನಿಗೆ ಆಧಾರ  ಇತ್ತೀಚಿಗೆ ಪ್ರವಾಹ ಬಂದು ಮನೆ ನೀರಿನಿಂದ ಬಿದ್ದು ಹೋಗಿದೆ . ಇಂಥದರಲ್ಲಿ ಜೀವನ ಸಾಗಿಸುತ್ತಿರುವ ಗೌಸ್ ಕಾಸಾರ(41) ವರ್ಷ ಬೇರೆಯವರಲ್ಲಿ ಕೆಲಸಕ್ಕೆಂದು ಹೋದ ಸಂದರ್ಭದಲ್ಲಿ ಆತನ ತಂದೆ ಮನೆಯಲ್ಲಿ ಸಾವನ್ನಪ್ಪಿದ್ದಾನೆ . ಆತನ ತಂದೆಯ ಮರಣದ ವಾರ್ತೆಯನ್ನು ಕೇಳಿ ಒಂದುಗಂಟೆಯಲ್ಲಿಯೇ ಆಘಾತಕ್ಕೆ ಒಳಗಾಗಿ ಮರಣ ಹೊಂದಿರುವುದು ಸುತ್ತಲಿನ ಗ್ರಾಮಸ್ಥರಿಗೆ ತುಂಬಲಾರದ ನೋವನ್ನುಂಟು ಮಾಡಿದೆ . ಇದರೊಂದಿಗೆ ಆತನ ಪಿತೃ ಭಕ್ತಿಯ ಬಗ್ಗೆ ಜನರಲ್ಲಿ ತುಂಬ ಅಭಿಮಾನವೂ ಮೂಡಿದೆ , ತಂದೆ ಮಗನ ಸಾವಿನ ಸುದ್ದಿ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಹರಡುತ್ತಿದ್ದಂತೆ ಅವರ ಅಪಾರ ಬಂಧು ಬಳಗ , ಉಪ ಮುಖ್ಯಮಂತ್ರಿ ಲಕ್ಷಣ ಸವದಿಯವರ ಸುಪುತ್ರ ಚಿದಾನಂದ ಸವದಿ , ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪಣ್ಣ ಸವದಿ , ಸಹಕಾರಿ ಧುರಿಣ ಕಾಶೀನಾಥ ಸವದಿ ಸೇರಿದಂತೆ ಹಲವಾರು ಮುಖಂಡರು ಆಗಮಿಸಿ ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದರು . ನಂತರ ರವಿವಾರ ಸಾಯಂಕಾಲ ಮುಸ್ಲಿಂ ಸಮಾಜದ ಪದ್ಧತಿಯಂತೆ ಖಬರಸ್ತಾನದಲ್ಲಿ ಅಕ್ಕ – ಪಕ್ಕ ತಂದೆ ಮಗನ – ಶವ ಸಂಸ್ಕಾರ ನೆರವೇರಿಸಿದರು.

 ಅಕ್ಕ – ಪಕ್ಕ ತಂದೆ ಮಗ ಶಾಶ್ವತವಾಗಿ ಚಿರನಿದ್ರೆಗೆ ಜಾರಿದ್ದಾರೆ.

REPORTER: RAMANNA. S.DODDANINGAPPAGOL SACHI TV ATHANI

LEAVE A REPLY

Please enter your comment!
Please enter your name here