ಸಿಂದಗಿಯ ಆದರ್ಶ ವಿದ್ಯಾಲಯ ವಿದ್ಯಾರ್ಥಿನಿ ಅಕ್ಷತಾ ಶಶಿಕಾಂತ ರಾಠೋಡ 625ಕ್ಕೆ/623…!

0

ಸಿಂದಗಿ: ಪಟ್ಟಣದ ಆದರ್ಶ ವಿದ್ಯಾಲಯ ಸಿಂದಗಿಯ ವಿದ್ಯಾರ್ಥಿನಿ ಕುಮಾರಿ. ಅಕ್ಷತಾ ಶಶಿಕಾಂತ ರಾಠೋಡ ಸಾ. ಹಿಟ್ನಳ್ಳಿ ತಾಂಡಾ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇಂಗ್ಲಿಷ 125/125, ಕನ್ನಡ 100/100, ಹಿಂದಿ 100/100, ಗಣಿತ 100/98, ಸಮಾಜ ವಿಜ್ಞಾನ 100/100 ಹಾಗೂ ವಿಜ್ಞಾನ 100/100 ಒಟ್ಟು 625ಕ್ಕೆ/623 ಅಂಕಗಳನ್ನು ಪಡೆಯುವ ಮೂಲಕ ಸಿಂದಗಿ ತಾಲೂಕಿಗೆ ಕೀರ್ತಿಯನ್ನು ತಂದಿದ್ದಾಳೆ.
ತಂದೆ ಜೇವರ್ಗಿ ತಾಲೂಕಿನ ಅಲ್ಲಾಪುರ ಪ್ರಾಥಮಿಕ ಶಾಲೆಯ ಶಿಕ್ಷರಾಗಿದ್ದು, ನನ್ನ ಈ ಸಾಧನೆಗೆ ನಮ್ಮ ತಂದೆ ತಾಯಿ ಮತ್ತು ನನ್ನ ಗುರುಗಳು ಒಳ್ಳೆಯ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದಾರೆ ಎಂದು ಹೇಳಿದರು. ಇವಳ ಸಾಧನೆಗೆ ತಾಲೂಕ ಶಿಕ್ಷಣಾಧಿಕಾರಿ ಎಚ್. ಎಸ್ ನಾಗನೂರ ಮತ್ತು ಶಾಲೆಯ ಪ್ರಾಚಾರ್ಯರು ಶ್ರೀಮತಿ ಜೆ. ಪಿ ನಂದಿಮಠ ಹರ್ಷ ವ್ಯಕ್ತಪಡಿಸಿದ್ದಾರೆ.

ವರದಿ: ಮಹಾಂತೇಶ ನೂಲಾನವರ, ಸಿಂದಗಿ

LEAVE A REPLY

Please enter your comment!
Please enter your name here