ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ
ಇಂದು ಸಿಂದಗಿ ನಗರದ ಶ್ರೀ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಕೋರೊನ ಮಹಾಮಾರಿ ರೋಗದ ಜನಜಾಗೃತಿ ಕಾರ್ಯಕ್ರಮವನ್ನು ಸಿಂದಗಿ ಮಂಡಲ ಅಧ್ಯಕ್ಷರಾದ ಶ್ರೀ ಈರಣ್ಣ ಎನ್ ರಾವೂರ ಅವರು ಉದ್ಘಾಟಿಸಿದರು. ಈ ಮಹಾಮಾರಿ ರೋಗದಿಂದ ಬಳಲುತ್ತಿರುವ ನಮ್ಮ ದೇಶದ ಜನತೆಯ ಸೌಖ್ಯತೆಯನ್ನು ಬಯಸುತ್ತೇನೆ ಹಾಗೂ ಇದರಿಂದ ಮುಕ್ತವಾಗಲ ನಾವೆಲ್ಲರೂ ದಿನಾಲು ಮಾಸ್ಕ್ ಮತ್ತು ಸ್ಯಾನಿಟಾಯಿಸರ್ ಕಡ್ಡಾಯವಾಗಿ ಬಳಸಬೇಕು, ಬಿಸಿನೀರಿನ ಸೇವನೆ ಮಾಡಬೇಕು ಎಂದು ಜನರಲ್ಲಿ ಮನವರಿಕೆ ಮಾಡಿದರು. ಶ್ರೀ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಬಸವರಾಜ ಹೂಗಾರ ಅವರು ದೇಶದ ಜನತೆ ಅಥವಾ ನಮ್ಮ ಸಿಂದಗಿ ನಗರದ ಜನತೆ ಅನಾವಶ್ಯಕ ಕಾರಣದಿಂದ ಮನೆಬಿಟ್ಟು ಹೊರಗಡೆ ಬರಬೇಡಿ ಏಕೆಂದರೆ ಕೋವಿಡ್-19 ರೋಗದಿಂದ ಮುಕ್ತರಾಗಬೇಕಾಗಿದೆ ಎಂದು ಮಾತನಾಡಿದರು ಶ್ರೀ ಎಮ್ ಎಸ್ ಮಠ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಸುನಂದಾ ಯಂಪೂರೆ, ಅಶೋಕ ಅಲ್ಲಾಪೂರ ಹಾಗೂ ಶೈಲಜಾ ಸ್ಥಾವರಮಠ ಮಾತನಾಡಿದರು. ಶ್ರೀಶೈಲಗೌಡ ಬಿರಾದಾರ, ಪು ಸದಸ್ಯ ಪ್ರತಿನಿಧಿ ಶ್ರೀ ಬಸವರಾಜ ಸಜ್ಜನ, ತಾಲ್ಲೂಕ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬಗಲಿ, ಚಂದ್ರಶೇಖರ ಅಮಲಿಹಾಳ, ಸತೀಶಗೌಡ ಬಿರಾದಾರ, ಸುದರ್ಶನ ಜಿಂಗಾಣಿ, ರಾಜು ಗೌಂಡಿ, ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಸಿದ್ದು ಪೂಜಾರಿ ಇತರರು ಪಾಲ್ಗೊಂಡಿದ್ದರು ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಿಂಗಣ್ಣ ಬಗಲಿ ಕಾರ್ಯಕ್ರಮ ನಿರೂಪಿಸಿದರು.
ವರದಿ ಚಂದ್ರು