ಸಿಂದಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧರಿಗೆ ಆಜಾದ ಯುವ ವೇದಿಕೆಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.

0

ಸಿಂದಗಿ; ದೇಶದ ಗಡಿ ಬಾಗದಲ್ಲಿ ಕುಟುಂಬದ ಬಾಂದವ್ಯದ ಹಂಗಿಲ್ಲದೆ ಮತ್ತು ತಮ್ಮ ಪ್ರಾಣವನ್ನೆ ಲೆಕ್ಕಿಸದೇ ದೇಶದ ರಕ್ಷಣೆಯಲ್ಲಿ ಯೋಧರ ಶ್ಲ್ಯಾಘನೀಯ ಕಾರ್ಯವಾಗಿದೆ ಎಂದು ಭಾಜಪ ರಾಷ್ಟ್ರೀಯ ಸದಸ್ಯ ಶಂಬುಲಿಂಗ ಕಕ್ಕಳಮೇಲಿ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸುಮಾರು ದೇಶಗಳನ್ನು ಸುತ್ತಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸುತ್ತಿರುವ ವೀರಯೋಧರಿಗೆ ಎಬಿವ್ಹಿಪಿ ಹಾಗೂ ಆಜಾದ ಯುವ ವೇದಿಕೆಯಿಂದ ಹಮ್ಮಿಕೊಂಡ ಅದ್ದೂರಿ ಮೇರವಣಿಗೆ ಹಾಗೂ ಪಥಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿ, ಯೋಧರು ಸೇವಾ ಸಂದರ್ಭದಲ್ಲಿ ಯಾವ ಸಂಬಂದಗಳನ್ನು ಎಣಿಸದೇ ಬರೀ ದೇಶದ ರಕ್ಷಣೆಯೇ ಮುಖ್ಯ ಗುರಿಯಾಗಿಟ್ಟುಕೊಂಡು ಸೇವೆ ಸಲ್ಲಿಸಿದ್ದರಿಂದ ನಾವು ದೇಶದೊಳಗೆ ನೆಮ್ಮದಿಯಿಂದ ಜೀವನ ಕಳೆಯುವಂತಾಗಿದೆ ಅದಕ್ಕೆ ಯೋಧರನ್ನು ಗೌರವದಿಂದ ಕಾಣಬೇಕು ಅಲ್ಲದೆ ಅವರು ಸಲ್ಲಿಸಿದ ಸೇವೆಯನ್ನು ಮುಂದಿನ ಪಿಳಿಗೆಗೆ ಪರಿಚಯಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಯೋಧರಿಗೆ ಮನವಿ ಮಾಡಿಕೊಂಡರು.
ನಂತರ ಪಟ್ಟಣದ ಜಗಜ್ಯೋತಿ ಬಸವೇಶ್ವರ, ಸಂಗೋಳ್ಳಿ ರಾಯಣ್ಣ, ಅಂಬಿಗರ ಚೌಡಯ್ಯ, ಡಾ. ಅಂಬೇಡ್ಕರ, ಮಹಾತ್ಮಾ ಗಾಂಧಿಜಿ ವೃತ್ತಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಬೈಕ್ ರ್ಯಾಲಿ ನಡೆಸಿ ಬಳಗಾನೂರ ಗ್ರಾಮದ ವರೆಗೆ ಪಥ ಸಂಚಲನ ನಡೆಸಿದರು ಗ್ರಾಮದಲ್ಲಿ ಸಮಸ್ತ ನಾಗರಿಕರು ಬೋಲೋ ಭಾರತ ಮಾತಾಕೀ ಜೈ ಎನ್ನುವ ಘೋಷಗಳೊಂದಿಗೆ ಭವ್ಯವಾಗಿ ಸ್ವಾಗತಿಸಿ ತೆರೆದ ವಾಹನನಲ್ಲಿ ನಿಲ್ಲಿಸಿ ಮೇರವಣಿಗೆಯ ಮೂಲಕ ಇಂದಿನ ಯುವಕರಿಗೆ ಸ್ಪೂರ್ತಿ ನೀಡುವ ನಿಟ್ಟಿನಲ್ಲಿ ಸಂದೇಶ ನೀಡಿದರು.
ನಂತರ ಬಳಗಾನೂರ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ಯೋಧ ಪರಸುರಾಮ ಜೇರಟಗಿ, ಮಹಿಬೂಬ ಜಾಲವಾದಿ ಮಾತನಾಡಿ, ದೇಶದ ರಕ್ಷಣೆಗೆ ಯವುದೇ ಜಾತಿ-ಧರ್ಮಗಳು ಬೇಕಾಗಿಲ್ಲ ದೇಶ ಸೇವೆಯೇ ಈಶ ಸೇವೆ ಇದನ್ನು ಇಂದಿನ ಯುವಕರು ಸೇನಾ ಪಡೆಗೆ ಆಯ್ಕೆ ಬಯಸಲು ಹಿಂಜರಿಕೆ ಪಡೆಯುತ್ತಿದ್ದು ಹಾಗೆ ಮಾಡದೇ ಸರಕಾರಿ ಸೇವೆಯಲ್ಲಿ ನಿಸ್ವಾರ್ಥ ಸೇವೆ ಎಂದರೆ ಗಡಿ ರಕ್ಷಣೆ ಅದನ್ನು ಅರಿತುಕೊಂಡು ಸೇವೆಗೆ ಸೇರಲು ಮುಂದದಾಗಬೇಕು ಎಂದು ಯುವಕರಿಗೆ ಕರೆ ನೀಡಿದರು.
ನಿವೃತ್ತ ಅರ್ಜುನ ದೋತ್ರೆ ಮಾತನಾಡಿ, 2003ರಲ್ಲಿ ಬೆಳಗಾವಿಯಲ್ಲಿ ಆಯ್ಕೆಗೊಂಡು ಭೂಪಾಲದಲ್ಲಿ ತರಬೇತಿ ಪಡೆದು ಪಂಜಾಬ, ಜಮ್ಮು ಕಾಶ್ಮೀರ, ಮದ್ಯಪ್ರದೇಶ, ಅರುಣಾಚಲಪ್ರದೇಶ, ಮಹಾರಾಷ್ಟ್ರ, ಮತ್ತೆ ಪಂಜಾಬನಲ್ಲಿ 31 ಜು 2020ಕ್ಕೆ ಸುಮಾರು 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದೇನೆ. ದೇಶ ಸೇವೆಯಲ್ಲಿ ಯಾವುದೇ ಜಾತಿ ಧರ್ಮಗಳ ಅಡ್ಡಿಯಾಗದು ದೇಶ ಸೇವೆಯ ಗುರಿ ಒಂದೇ ಇಟ್ಟುಕೊಂಡು ಗಡಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗುತ್ತೆವೆ ಅಲ್ಲಿ ಯಾವುದೇ ಸಂಬಂದಗಳ ನೆನಪಿಗೆ ಬರುವುದಿಲ್ಲ. ಅಲ್ಲದೆ ಈ ಸೇವಾ ಅವಧಿಯಲ್ಲಿ ನಮ್ಮ ನಿವೃತ್ತಿ ಸಮಯ ಬಂದದ್ದೆ ನಮಗೆ ಗೊತ್ತಾಗಿಲ್ಲ. ಹೀಗೆ ಈ ಸೇವೆಯಲ್ಲಿ ಎಲ್ಲವನ್ನು ಮರೆಯುತ್ತೇವೆ ಬರೀ ಯಾವ ಕಡೆಯಿಂದ ನೂಸುಳುಕೊರರು ಬರುತ್ತಾರೆ ಮತ್ತು ದೇಶಕ್ಕೆ ಗಂಡಾಂತರ ತರುವ ಸಲಕರಣೆಗಳು ಸಾಗಾಟ ನಡೆಯದ ಹಾಗೆ ನೋಡಿಕೊಳ್ಳುತ್ತೇವೆ ಹೀಗೆ ರಾತ್ರಿ-ಹಗಲು ಮತ್ತು ಹಸಿವಿನ ಪರಿವಿಲ್ಲದೇ ದೇಶ ಸೇವೆಯೇ ಈಶ ಸೇವೆಯಂದು ಸೇವೆ ಸಲ್ಲಿಸಿದ್ದು ಸಮಯಕ್ಕೆ ತಕ್ಕಂತೆ ಎಲ್ಲವು ಅನುಕೂಲಗಳ ವ್ಯವಸ್ಥೆಗಳು ತಾನಾಗಿಯೇ ಬಂದು ಹೋಗುತ್ತವೇ ಪ್ರತಿಯೊಂದು ಮನೆಯಲ್ಲಿ ತಮ್ಮ ಮಕ್ಕಳನ್ನು ದೇಶ ರಕ್ಷಣಾಪಡೆಗೆ ಸೇರಿಸಿ ಎಂದು ಪಾಲಕರಲ್ಲಿ ಕೇಳೀಕೊಂಡರು. ಈ ಸಂದರ್ಭದಲ್ಲಿ ಬಳಗಾನೂರ ಆಜಾದ ಯುವ ಬೇದಿಕೆಯ ಮಹೇಶ ಮಂಜಾಳಕರ, ಪರಸುರಾಮ ನೇದಲಗಿ, ಹಿರಗಪ್ಪ ಹಿಕ್ಕನಗುತ್ತಿ, ಎಬಿವ್ಹಿಪಿಯ ಬಾಗಣ್ಣ ಹೂಗಾರ, ಶ್ರೀಶೈಲ ಜಮಾದಾರ, ಮಹಾಂತೇಶ ನಾಯ್ಕೋಡಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮಹಾಂತೇಶ ನೂಲಾನವರ, ಸಿಂದಗಿ.

LEAVE A REPLY

Please enter your comment!
Please enter your name here