ಸಿಂದಗಿ : ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಸಂಸ್ಥೆಯ ಶ್ರೀ ಪೂಜ್ಯಶ್ರೀ ಚೆನ್ನವೀರ ಸ್ವಾಮೀಜಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಎಸ್.ಎಸ್.ಮಲ್ಲೇದ ಅವರು ವಯೋನಿವೃತ್ತಿಯಾದ ಪ್ರಯುಕ್ತ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದವತಿಯಿಂದ ಹೃದಯಸ್ಪರ್ಶಿ ಸನ್ಮಾನ ಸಮಾರಂಭ ಜರುಗಿತು.

0

ಸಂಘದ ಅಧ್ಯಕ್ಷ ಆರ್.ಎಚ್.ಬಿರಾದಾರ ಮಾತನಾಡಿ, ಹುಟ್ಟು ಸಾವು ಮಧ್ಯ ನಾವು ಮಾಡಿದ ಕೆಲಸಗಳು ಶಾಶ್ವತವಾಗಿರುತ್ತವೆ. ಯಾವುದೇ ವೃತ್ತಿಯಲ್ಲಿರಲಿ ಅವರ ಕಾರ್ಯವೈಖರಿ ಮೇಲೆ ಅವಲಂಬಿತವಾಗಿರುತ್ತದೆ. ಅಂಥವರಲ್ಲಿ ದೈಹಿಕ ಶಿಕ್ಷಕ ಎಸ್.ಎಸ್.ಮಲ್ಲೇದ ಅವರು ತಮ್ಮ 40 ವರ್ಷದ ಸೇವಾವಧಿಯಲ್ಲಿ ಅತ್ಯುತ್ತಮ ಸೇವೆ ಮಾಡಿದ್ದಾರೆ ಅವರು ತಮ್ಮ ವೃತ್ತಿಯಲ್ಲಿ ಯಾವುದೇ ಕೆಲಸವಿದ್ದರೂ ಸಹ ಭಾಗವಹಿಸಿ ಶಿಕ್ಷಕರ ಹಾಗೂ ಮಕ್ಕಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ದೈಹಿಕ ಶಿಕ್ಷಕ ಎಸ್.ಎಸ್.ಮಲ್ಲೇದ ಮಾತನಾಡಿ, ನಾವು ಯಾವುದೇ ಕೆಲಸದಲ್ಲಿ ಇರಲೀ ಅದನ್ನು ಶಿರಸ್ಸಾವಹಿಸಿ ಮಾಡಿದರೇ ಅದರಲ್ಲಿ ತೃಪ್ತಿ ಸಿಗುತ್ತದೆ ನಾವು ಮಾಡುವ ವೃತ್ತಿಯನ್ನು ಪ್ರವೃತ್ತಿಯಾಗಿ ಪ್ರೀತಿಯಿಂದ ಕಾಣಬೇಕು ಎಂದರು.
ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪಿ.ಎಸ್.ಅಗ್ನಿ, ಕಾರ್ಯದರ್ಶಿ ರಮೇಶ ಬಿರಾದಾರ, ಸಂಘಟನಾ ಕಾರ್ಯದರ್ಶಿ ಎಸ್.ಆರ್.ನಾಯಕ, ಸಹಕಾರ್ಯದರ್ಶಿ ಎಸ್.ಜಿ.ಶಹಾಪುರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು..
ವರದಿ : ಮಹಾಂತೇಶ ಎನ್ ನೂಲಾನವರ, ಸಿಂದಗಿ

LEAVE A REPLY

Please enter your comment!
Please enter your name here