ಸಿಂದಗಿ- ವಚನಗಳು ನಮ್ಮ ಬದುಕನ್ನು ಬದಲಿಸುವ ಗುಣಗಳನ್ನು ಒಳಗೊಂಡಿವೆ. ಶರಣರ ಪ್ರತಿ ವಚನದಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಬದುಕಿನ ಆದರ್ಶಗಳನ್ನು ಕಾಣುತ್ತೇವೆ ಎಂದು ಪಟ್ಟಣದ ಎಚ್.ಜಿ.ಪದವಿ ಪೂರ್ವ ಮಹಾ ವಿದ್ಯಾಲಯದ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ಹೇಳಿದರು.

0

ಸಿಂದಗಿ- ವಚನಗಳು ನಮ್ಮ ಬದುಕನ್ನು ಬದಲಿಸುವ ಗುಣಗಳನ್ನು ಒಳಗೊಂಡಿವೆ. ಶರಣರ ಪ್ರತಿ ವಚನದಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಬದುಕಿನ ಆದರ್ಶಗಳನ್ನು ಕಾಣುತ್ತೇವೆ ಎಂದು ಪಟ್ಟಣದ ಎಚ್.ಜಿ.ಪದವಿ ಪೂರ್ವ ಮಹಾ ವಿದ್ಯಾಲಯದ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರ ತಾಲೂಕಾ ಘಟಕ ಸಿಂದಗಿ ಹಾಗೂ ರಾಗರಂಜಿನಿ ಸಂಗೀತ ತರಬೇತಿ ಕೇಂದ್ರಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ಪರಿಷತ್ತಿನ ಸಂಸ್ಥಾಪನ ದಿನ ಹಾಗೂ ಸಂಸ್ಥಾಪಕರಾದ ಸೂತ್ತೂರು ಜಗದ್ಗುರು ಡಾ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನದ ಅಂಗವಾಗಿ ಆಯೋಜಿಸಿರುವ ವಚನ ದಿನ ಹಾಗೂ ಲಿಂ.ನೀಲಗಂಗವ್ವ ಗುರುಲಿಂಗಪ್ಪ ಪಟ್ಟಣಶೆಟ್ಟಿ ಹಾಗೂ ಲಿಂ.ಗುರುಲಿಂಗಪ್ಪ ಶಿವಸಂಗಪ್ಪ ಪಟ್ಟಣಶೆಟ್ಟಿ ಅವರ ಸ್ಮರಣಾರ್ಥ ದತ್ತಿದಾನಿಗಳಾದ ಬಿ.ಜಿ.ಪಟ್ಟಣಶೆಟ್ಟಿ ಅವರ ಕೊಡಮಾಡಿರುವ ದತ್ತಿ ಉಪನ್ಯಾಸದಲ್ಲಿ ವಚನ ಸಾಹಿತ್ಯ ಮತ್ತು ಜೀವನದ ಮೌಲ್ಯದ ಕುರಿತಾಗಿ ಉಪನ್ಯಾಸ ನೀಡಿದರು.
ಈ ಸಂಧರ್ಭದಲ್ಲಿ ಉಪನ್ಯಾಸಕ ಪ್ರಸನ್ನಕುಮಾರ ಜೋಗೂರ ಅವರು ವಚನ ಸಾಹಿತ್ಯದ ಮಹತ್ವ ಮತ್ತು ವಿಶೇಷತೆ ಕುರಿತು ಮಾತನಾಡಿ, ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ವಚನ ಸಾಹಿತ್ಯದ ಪಾತ್ರವು ದೊಡ್ಡದು ಎಂದರು.
ಈ ಸಂಧರ್ಭದಲ್ಲಿ ವಿವಿಧ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಶರಣ ಶರಣೆಯರ ಜೀವನ ಮೌಲ್ಯಗಳ ಕುರಿತಾಗಿ ಪ್ರಭಂದ ಸ್ಪರ್ಧೆ ಎರ್ಪಡಿಸಿತ್ತು ಅದರಲ್ಲಿ ವಿಜೇತರಾದವರಿಗೆ ನಗದು ಬಹುಮಾನ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎಮ.ಎಂ.ಪಡಶೆಟ್ಟಿ ಅವರು ವಹಿಸಿ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಚನ್ನಪ್ಪ ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ.ಶರಣಬಸವ ಜೋಗೂರ, ಚನ್ನಪ್ಪ ಗೋಣಿ, ಭಾಗಣ್ಣ ತಮದಡ್ಡಿ, ರವಿ ಮಣೂರ, ಸುಕೃತಾ ಪಟ್ಟಣಶೆಟ್ಟಿ, ರೇಣುಕಾ ಪಟ್ಟಣಶೆಟ್ಟಿ, ಪ್ರದೀಪ ಕತ್ತಿ, ಎಫ್. ಹಾಲಪ್ಪನವರ, ಪ್ರಲ್ಲಾದ ಜೆ.ಕೆ ಸೆರಿದಂತೆ ಇತರರು ಇದ್ದರು.
ಶಿಕ್ಷಕ ಶಿವಕುಮಾರ ಶಿವಶಿಂಪಿಗೇರ ನಿರೂಪಿಸಿದರು, ಮಹಾಂತೇಶ ನೂಲಾನವರ ಸ್ವಾಗತಿಸಿದರು, ಶೈಲಶ್ರೀ ಪಟ್ಟಣಶೆಟ್ಟಿ ವಂದಿಸಿದರು.

ವರದಿ ಮಹಾಂತೇಶ ನೂಲಾನವರ, ಸಿಂದಗಿ

 

LEAVE A REPLY

Please enter your comment!
Please enter your name here