ಸಿಪಿಎಲ್ 2020: ಸೋಲರಿಯದ ನೈಟ್ ರೈಡರ್ಸ್‌ಗೆ ಝೌಕ್ಸ್ ಸವಾಲು

0

ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಈ ಬಾರಿಯ ಆವೃತ್ತಿ ಇದಿಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂದು ನಡೆಯಲಿರುವ ಪಂದ್ಯದಲ್ಲಿ ಸಿಪಿಎಲ್ ಟೂರ್ನಿಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಸತತ ಗೆಲುವುಗಳಿಂದ ಮಿಂಚುತ್ತಿರುವ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ಹಾಗೂ ಮೂರನೇ ಸ್ಥಾನದಲ್ಲಿರುವ ಸೇಂಟ್ ಲೂಸಿಯಾ ಝೌಕ್ಸ್ ಸೆಣೆಸಾಟವನ್ನು ನಡೆಸಲಿದೆ.

ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಏರುವ ನಾಲ್ಕು ತಂಡಗಳು ಈಗಾಗಲೇ ನಿರ್ಧಾರವಾಗಿದೆ. ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡಕ್ಕೆ ಈ ಪಂದ್ಯದ ಸೋಲು ಹಾಗೂ ಗೆಲುವು ಯಾವುದೇ ರೀತಿಯ ಬದಲಾವಣೆಗೂ ಕಾರಣವಾಗುವುದಿಲ್ಲ. ಮುಂದಿನ ಎರಡು ಪಂದ್ಯಗಳಲ್ಲಿ ಟಿಕೆಆರ್ ಸೋತರು ಅದು ಅಗ್ರ ಸ್ಥಾನದಲ್ಲಿಯೇ ಮುಂದುವರಿಯಲಿದೆ. ಆದರೆ ಸೇಂಟ್ ಲೂಸಿಯಾ ಝೌಕ್ಸ್ ತಂಡ ಮುಂದಿನ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಅವಕಾಶವಿದೆ.

ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡ ಸರ್ವಾಂಗೀಣ ಪ್ರದರ್ಶನದ ಮೂಲಕ ಮಿಂಚುತ್ತಿದೆ. ಕಠಿಣ ಪರಿಸ್ಥಿತಿಯಲ್ಲಿ ಒಬ್ಬರಲ್ಲಾ ಒಬ್ಬರು ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ನಯಟ್ ರೈಡರ್ಸ್ ಎದುರಾಳಿಯನ್ನು ಸಂಪೂರ್ಣವಾಗಿ ಕಟ್ಟಿ ಹಾಕಲು ಯಶಸ್ವಿಯಾಗುತ್ತಿದೆ. ಮತ್ತೊಂದೆಡೆ ಸೇಂಟ್ ಲೂಸಿಯಾ ಝೌಕ್ಸ್ ಕೂಡ ಕೆಲ ಕಠಿಣ ಪಂದ್ಯಗಳನ್ನೂ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ನಾಯಕ ಡ್ಯಾರೆನ್ ಸಮಿ ಅನುಭವ ತಂಡಕ್ಕೆ ಆಸರೆಯಾಗಿದೆ.

ಸಂಭವನೀಯ ತಂಡ

ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್: ಲೆಂಡ್ಲ್ ಸಿಮ್ಮನ್ಸ್, ಅಮೀರ್ ಜಂಗೂ, ಕಾಲಿನ್ ಮುನ್ರೊ, ಡ್ಯಾರೆನ್ ಬ್ರಾವೋ, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಸಿಕಂದರ್ ರಾಜಾ, ಡ್ವೇನ್ ಬ್ರಾವೋ (ನಾಯಕ), ಅಕೀಲ್ ಹುಸೈನ್, ಆಂಡರ್ಸನ್ ಫಿಲಿಪ್, ಖಾರಿ ಪಿಯರೆ, ಪ್ರವೀಣ್ ತಾಂಬೆ

ಸೇಂಟ್ ಲೂಸಿಯಾ ಝೌಕ್ಸ್ : ರಖೀಮ್ ಕಾರ್ನ್‌ವಾಲ್, ಆಂಡ್ರೆ ಫ್ಲೆಚರ್ (ವಿಕೆಟ್ ಕೀಪರ್), ಲೆನಿಕೊ ಬೌಷರ್, ಕವೆಮ್ ಹಾಡ್ಜ್, ನಜೀಬುಲ್ಲಾ ಖಾದ್ರಾನ್, ಮೊಹಮ್ಮದ್ ನಬಿ, ಡ್ಯಾರೆನ್ ಸ್ಯಾಮಿ (ನಾಯಕ), ಜಾವೆಲ್ಲೆ ಗ್ಲೆನ್, ಸ್ಕಾಟ್ ಕುಗ್ಗೆಲೆಜಿನ್, ಕೆಸ್ರಿಕ್ ವಿಲಿಯಮ್ಸ್, ಚೆಮರ್ ಹೋಲ್ಡರ್

LEAVE A REPLY

Please enter your comment!
Please enter your name here