ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಾಟೆ ಪ್ರಕರಣದ ತನಿಖೆಯನ್ನ ನಡೆಸುತ್ತಿರುವ ಸಿಸಿಬಿಗೆ ಮಾಜಿ ಮೇಯರ್ ಸಂಪತ್ ರಾಜ್ ಅವರ ತನಿಖೆ ದೊಡ್ಡ ತಲೆ ನೋವಾಗಿದೆ. ಸಂಪತ್ ರಾಜ್ ಅವರ ಮೊಬೈಲ್ನಲ್ಲಿ ಡಿಲೀಟ್ ಆಗಿರುವ ಮೆಸೇಜ್ ಹಾಗೂ ಡೇಟಾಗಳನ್ನ ಮತ್ತೆ ರಿಕವರಿ ಮಾಡೋದೇ ತನಿಖಾಧಿಕಾರಿಗಳಿಗೆ ಸಮಸ್ಯೆಯಾಗಿದೆಯಂತೆ.
ಯಾಕಂದ್ರೆ ಸಂಪತ್ ರಾಜ್ ಬಳಸುತ್ತಿರೋದು ಅತ್ಯಾಧುನಿಕ ಮಾದರಿಯ ಐಫೋನ್. ಸಂಪತ್ ರಾಜ್ ಐ-ಫೋನ್ ಕಂಪನಿಯ 11 ಸಿರೀಸ್ ಮೊಬೈಲ್ ಬಳಸುತ್ತಿದ್ದಾರೆ. ಈ ಫೋನಿನ ರಿಟ್ರೀವಲ್ ಸಿಸ್ಟಮ್ ಸಿಸಿಬಿ ಬಳಿ ಇಲ್ಲ. ಸಿಸಿಬಿ ಬಳಿ ಇರುವ ರಿಟ್ರೀವಲ್ ಸಿಸ್ಟಮ್ನಿಂದ ಐಫೋನ್ನ ಸಿರೀಸ್-8ರ ದಾಖಲೆಗಳನ್ನ ಮಾತ್ರ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂಪತ್ ರಾಜ್ರ ಮೊಬೈಲ್ ಅನ್ನ ಕೇರಳದ ತಿರುವನಂತಪುರಂಗೆ ಸಿಸಿಬಿ ಅಧಿಕಾರಿಗಳು ತಲುಪಿಸಿದ್ದಾರೆ.
ಸಂಪತ್ ರಾಜ್ ಮೊಬೈಲ್ ರಿಟ್ರೀವಲ್ ಹೇಗೆ ಆಗುತ್ತೆ..?
ಐ-ಫೋನ್ಗಳನ್ನ ಎರಡು ಮಾದರಿಯಲ್ಲಿ ಡಿಲೀಟ್ ಆಗಿರುವ ಮೆಸೇಜ್ಗಳನ್ನ ರಿಕವರಿ ಮಾಡಲಾಗುತ್ತದೆ.
1. ಅವರ ಐ-ಪೋನ್ ಅಕೌಂಟ್ ಮೂಲಕ ಕ್ಲೌಡ್ ಡಾಟಾ
- ಐಪೋನ್ನ ಒಂದು ಅಕೌಂಟ್ ಮೂಲಕ ಆಯಕ್ಟಿವೇಟ್ ಮಾಡಲಾಗಿರುತ್ತದೆ
- ಐಐಡಿ ಮೂಲಕವೇ ರಿಸ್ಟೋರ್ ಫ್ಯಾಕ್ಟರಿ ಸೆಟ್ ಸಹ ಮಾಡಿರುವ ಸಾಧ್ಯತೆ ಇರುತ್ತದೆ
- ಕ್ಲೌಡ್ನಲ್ಲಿ ಸೇವ್ ಆಗಿದ್ದು, ಅಕೌಂಟ್ ಡಿ ಆಕ್ಟಿವೇಟ್ ಆಗಿದ್ರೂ ರಿಕವರಿ ಆಗಲಿದೆ
2. ಮೊಬೈಲ್ ಮೆಮೊರಿಯ ಡಾಟಾ ರಿಟ್ರೀವಲ್ ಮಾಡಲಾಗುತ್ತೆ
- ಡಿಲೀಟ್ ಆಗಿರುವ ಮೆಸೇಜ್ಗಳು ಮತ್ತು ಮಲ್ಟಿಮೀಡಿಯಾ ಫೈಲ್ಗಳ ರಿಕವರಿ
- ಇದಕ್ಕೆ ರಿಕವರಿ ಮಾಡಲು ಕೆಲ ಸಾಫ್ಟ್‌ವೇರ್ ಟೂಲ್ಸ್ ಬಳಕೆ ಮಾಡಲಾಗುತ್ತೆ
- ಐ ಪೋನ್ಗೆ ರಿಟ್ರೀವಲ್ ಮಾಡಲು ಕೆಲ ಮುಖ್ಯವಾದ ಟೂಲ್ಸ್ ಅಗತ್ಯವಿದೆ
- ಸದ್ಯದ ಟೆಕ್ನಾಲಜಿಯ ಪ್ರಕಾರ ಎಲ್ಲಾ ಡಿಲಿಟೆಡ್ ಆಗಿರುವ ಡಾಟಾ ಸಿಗಲಿದೆ
- ಸೈಬರ್ ಎಕ್ಸ್ಪರ್ಟ್ ಪ್ರಕಾರ ಮೊಬೈಲ್ ರಿಟ್ರೀವಲ್ ಮಾಡಬಹುದು