ಸೀಲ್ ಡೌನ್ ಪ್ರದೇಶದಲ್ಲಿ ಎಲ್ಲ ಇಲಾಖೆಯ ತಂಡ ರಚಿಸಿ ಕಾರ್ಯನಿರ್ವಹಣೆ

0

ಹರಿಹರ : ಇಂದಿನಿಂದ ನಗರದಲ್ಲಿರುವ ಎಲ್ಲಾ ಸೀಲ್ ಡೌನ್ ಪ್ರದೇಶಗಳಲ್ಲಿ ಎಲ್ಲ ಇಲಾಖೆಯ ತಂಡ ರಚಿಸಿ ಕಾರ್ಯ ನಿರ್ವಹಣೆ ಮಾಡಲಾಗುವುದು ಎಂದು ತಹಸಿಲ್ದಾರ್ ಕೆ.ಬಿ.ರಾಮಚಂದ್ರಪ್ಪ ಸ್ಪಷ್ಟ ಪಡಿಸಿದರು.
ನಗರದ ಮಿನಿವಿಧಾನಸೌಧದ ಸಭಾಂಗಣದಲ್ಲಿ ಸೋಮವಾರ ಸಂಜೆ ತಾಲೂಕಿನ ವಿವಿಧ ಇಲಾಖೆ ಯ ಅಧಿಕಾರಿಗಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದಲ್ಲಿ 4 ಕ್ವಾರಂಟೈನ್ ಪ್ರದೇಶ ಗಳಿದ್ದು ಅಲ್ಲಿ ಸಿಬ್ಬಂದಿಗಳು ಸರಿಯಾದ ಕರ್ತವ್ಯ ನಿರ್ವಹಣೆ ಮಾಡದೇ ಇರುವ ಬಗ್ಗೆ ಸಾರ್ವಜನಿಕರು ದೂರುತ್ತಿದ್ದಾರೆ. ಈ ಕಾರಣಕ್ಕಾಗಿ ಇಂದಿನಿಂದಲೇ ತಾಲೂಕಿನ ಎಲ್ಲ ಇಲಾಖೆಯ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ದಿನ ದ 24 ಗಂಟೆ ಕಾರ್ಯ ನಿರ್ವಹಣೆ ಮಾಡಲಾಗುವು ದು ಎಂದು ತಿಳಿಸಿದರು.
ಕೆಲವು ಕ್ವಾರಂಟೈನ್ ಪ್ರದೇಶದಲ್ಲಿ ಜನರು ಯಾವುದೇ ಮಾಹಿತಿ ನೀಡದೆ ಬೇರೆ ಕಡೆ ವಲಸೆ ಹೋಗುತ್ತಿದ್ದಾರೆ ಎಂಬ ಮಾಹಿತಿ ಸಹ ದೊರೆತಿದ್ದು ಅಂತಹವರನ್ನು ಪೊಲೀಸ್ ಇಲಾಖೆಯ ಮೂಲಕ ಮತ್ತೆ ವಾಪಾಸ್ ಕ್ವಾರಂಟೈನ್ ಪ್ರದೇಶಕ್ಕೆ ಕರೆತರ ಲಾಗುವುದು ಎಂದು ವಿವರಣೆ ನೀಡಿದರು.
ಪೊಲೀಸ್ ಇಲಾಖೆಯಿಂದ ಸಿಬ್ಬಂದಿಗಳ ಕೊರತೆ ಯ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್ ಅವರು ಮೇಲಾಧಿಕಾರಿಗಳಿಗೆ ಸೂಕ್ಷ್ಮ ಪರಿಸ್ಥಿತಿಯನ್ನು ವಿವರಿಸಿ ವರದಿ ಸಲ್ಲಿಸುವಂತೆ ಪಿಎಸ್ಐ ರವರಿಗೆ ಸೂಚನೆ ನೀಡಿದರು. ಅಲ್ಲದೆ ತಮ್ಮ ಸಿಬ್ಬಂದಿ ಗಳು ಸಹ  ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಸಹ ಸಲಹೆ ನೀಡಿದರು.
ಮುಖ್ಯವಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ನಗರಸಭೆಯ ಸಿಬ್ಬಂದಿಗಳು ದಿನದ 24 ಗಂಟೆ ಅವಿರತವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಅವರಿಗೆ ನಾವು ಸಹಕಾರ ನೀಡಬೇಕಾದ ಅನಿವಾರ್ಯತೆ ಇದ್ದು ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಸಹ ತಮ್ಮ ಸಹಕಾರವನ್ನು ನೀಡಬೇಕು ಎಂದು ಹೇಳಿದರು.
ಇದೇ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾಕ್ಟರ್ ಚಂದ್ರಮೋಹನ್ ಮಾತನಾಡಿ ದಾವಣಗೆರೆ ಜಿಲ್ಲೆಯಲ್ಲಿಯೇ  ನಮ್ಮ ತಾಲೂಕಿ ನಿಂದ ಅತಿಹೆಚ್ಚು ಸ್ಯಾಂಪಲ್ ಗಳು ಸಂಗ್ರಹಣೆ ಮಾಡಲಾಗಿದ್ದು ಸುಮಾರು 2485 ಸಂಗ್ರಹಿಸಿ ಕಳಿಸಲಾಗಿದೆ ಮತ್ತು ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಜೂನ್ 22 ರ ತನಕ ಕಳುಹಿಸಲಾದ ಎಲ್ಲಾ ಶಾಂಪಲ್ ಗಳು ನೆಗೆಟಿ ವ್ ಬಂದಿರುವುದಾಗಿ ಮಾಹಿತಿ ಬಂದಿದೆ. ಮುಂದಿನ ವುಗಳ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. 17  ಪಾಸಿಟಿವ್ ಪ್ರಕರಣಗಳಲ್ಲಿ  12 ಪ್ರಕರಣಗಳು  ನೆಗೆಟಿವ್  ಫಲಿತಾಂಶ ಬಂದಿದ್ದು  ಡಿಸ್ಚಾರ್ಜ್ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದರು.
ಕೋವಿಡ್ 19 ರ ಕಾರ್ಯದಲ್ಲಿ ಯಾವುದೇ ರೀತಿಯ ಕುಂದುಕೊರತೆಗಳು ತಾರತಮ್ಯಗಳು ಬರದಂತೆ ಕರ್ತವ್ಯ ನಿರ್ವಹಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ತಾಸಿಲ್ದಾರ್ ಅವರು ಸೂಚನೆ ನೀಡಿದರು.
ಈ ಸಮಯದಲ್ಲಿ ತಾಪಂ ಕಾರ್ಯನಿರ್ವಹಣಾಧಿ ಕಾರಿ ಬಿ.ಲಕ್ಷ್ಮಿಪತಿ, ಪೌರಾಯುಕ್ತೆ ಎಸ್. ಲಕ್ಷ್ಮೀ, ಪಿ ಎಸ್ ಐ ಶೈಲಶ್ರೀ.ಎಸ್, ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿ ರಂಗನಾಥ್, ಸಮಾಜ ಕಲ್ಯಾಣ ಇಲಾಖೆ ಯ ಮಮತಾ, ಆರೋಗ್ಯ ಇಲಾಖೆಯ ಎಂ.ವಿ. ಹೊರಕೇರಿ, ಎಸ್.ಎಚ್.ಪಾಟೀಲ್, ಎಂ.ಉಮಣ್ಣ, ಕಂದಾಯ ಇಲಾಖೆಯ ಸಂತೋಷ್, ಗ್ರಾಮಲೆಕ್ಕಿಗ ಎಚ್.ಜಿ.ಹೇಮಂತ್  ಅಲ್ಲದೆ ಇಲಾಖೆಯ ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು.

Video

LEAVE A REPLY

Please enter your comment!
Please enter your name here