ಸುದ್ದುಗುಂಟೆಪಾಳ್ಯ ಪೊಲೀಸರಿಂದ ಆಶ್ಯಿಶ್ ಆಯಿಲ್​ ಮಾರಾಟಗಾರರ ಬಂಧನ

0

ಸುದ್ದಗುಂಟೆಪಾಳ್ಯ ಪೊಲೀಸರು ಮಾದಕವಸ್ತುಗಳ ಕಿಂಗ್​ಪಿನ್​ ಎಂದೇ ಕರೆಯಲಾಗುವ ಆಶ್ಯಿಶ್ ಆಯಿಲ್​ ಮಾರಾಟಮಾಡುತ್ತಿದ್ದ ಆಂದ್ರಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸುರಕತ್ತಿ ಪ್ರಭಾಕರ್​ ಮತ್ತು ಕೊರಳ ಕಾಮರಾಜ್​ ಬಂಧಿತ ಆರೋಪಿಗಳು.

ನಗರದಲ್ಲಿ ಇಂದು ನಡೆದ ಸುದ್ಧಿಘೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್ ಮುರುಗನ್​ ಈ ಕುರಿತು ಮಾಹಿತಿನೀಡಿದ್ದಾರೆ. ಮಾದಕವಸ್ತುಗಳ ಗಳ ಕಿಂಗ್​ ಪಿನ್​ ಎಂದೇ ಕರೆಸಿಕೊಳ್ಳುವುದು ಆಯಶಿಶ್​ ಆಯಿಲ್​, ವಿಶಾಖಪಟ್ಟಣದಲ್ಲಿ ತಯಾರಾಗುವ ಈ ಮಾದಕದ್ರವ್ಯಕ್ಕೆ ರಾಜಧಾನಿಯಲ್ಲಿ ಬಹುಬೇಡಿಕೆ ಇದೆ. ಇದನ್ನೇ ಬಂಡವಾಳವಾಗಿಸಿಕೊಂಡ ಮಾದಕ ಜಾಲ ಬೆಂಗಳೂರಿನಲ್ಲಿ ಸೃಷ್ಠಿಯಾಗಿದೆ. ಐಟಿ-ಬಿಟಿ ಉದ್ಯೋಗಿಗಳನ್ನೇ ಗುರಿಯಾಗಿಸಿಕೊಂಡ ಈ ಜಾಲ ಸದ್ದಿಲ್ಲದೆ ಬಸ್​ನಲ್ಲೂ ಸರಬರಾಜು,ಮಾಡಲು ಆರಂಭಿಸಿತ್ತು. ಖಚಿತ ಮಾಹಿತಿಯ ಮೇರೆಗೆ ಸುದ್ದುಗುಂಟೆಪಾಳ್ಯ ಪೊಲೀಸರು ಇಂಥಜಾಲವೊಂದನ್ನು ಭೇದಿಸಿದ್ದಾರೆ.

‌ ಯುವಕ-ಯುವತಿಯರು, ಐಟಿ ಬಿಟಿ ಉದ್ಯೋಗಿಗಳನ್ನು ಗುರಿಯಾಗಿಟ್ಟು ಕೊಂಡಿದ್ದ ಆರೋಪಿಗಳು ಬೈಕ್​ಗಳಲ್ಲಿ ಬಂದು ನಗರದ ಪತ್ರಿಷ್ಠಿತ ಕಾಲೇಜು, ಐಟಿಬಿಟಿ ಕಂಪನಿಗಳ ಬಳಿ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಅವರಿಂದ 950 ಗ್ರಾಂ‌ ಆಯಿಲ್, 3 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಎಂದಿದ್ದಾರೆ.

LEAVE A REPLY

Please enter your comment!
Please enter your name here