ಸುಮಾರು ಎರಡುವರೆ ಗಂಟೆಗಳ ಕಾಲ ಮಂಜುಗಡ್ಡೆಯೊಳಗೆ ನಿಂತು ವರ್ಡ್​ ರೆಕಾರ್ಡ್​

0

ನಾವು ಡಿಸೆಂಬರ್​, ಜನವರಿಯ ಮುಂಜಾವಿನ ಸಮಯದಲ್ಲಿ ಎಷ್ಟು ಚಳಿ..? ಎಂದು ಶೆಟರ್​ ಧರಿಸಿ ಹೊರಹೋಗುತ್ತೇವೆ. ಬೆಚ್ಚನೆಯ ಕಾಫಿನೋ ಟೀ ಕುಡಿಯುತ್ತೇವೆ, ಇಲ್ಲಾ ಕಂಬಳಿ ಹೊದ್ದು ಮಲಗುತ್ತೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಚಳಿಗೆ ಡೋಂಟ್​ ಕೇರ್​ ಎನ್ನದೇ ಸುಮಾರು ಎರಡುವರೆ ಗಂಟೆಗಳ ಕಾಲ ತನ್ನ ದೇಹವನ್ನು ಮಂಜುಗಡ್ಡೆಯವೊಳಗೆಯಿಟ್ಟು ವರ್ಡ್ ರೆಕಾರ್ಡ್​ ಮಾಡಿದ್ದಾರೆ.

ಜೋಸೆಫ್​ ಕೋಬೆರ್ಲ್​ ಎನ್ನುವವರು ಎರಡು ಗಂಟೆ, 30 ನಿಮಿಷದ 57 ಸೆಕೆಂಡ್​ಗಳ ಕಾಲ ತಮ್ಮ ದೇಹವನ್ನು ಮಂಜುಗಡ್ಡೆಯಿಂದ ಕೂಡಿದ ಗಾಜಿನ ಬಾಕ್ಸ್​ನಲ್ಲಿ ಇರಿಸಿದ್ದರು. ಅವರು ಕುತ್ತಿಯಿಂದ ಮೇಲಿನ ಭಾಗ ಹೊರತು ಪಡಿಸಿ, ಬಟ್ಟೆ ಧರಿಸದೇ ಮಂಜುಗಡ್ಡೆಯೊಳಗಿರುವ ಮೂಲಕ ರೆಕಾರ್ಡ್ ಕ್ರಿಯೇಟ್​ ಮಾಡಿದ್ದಾರೆ. ಮಂಜುಗಡ್ಡೆಯ ಚಲಿಯಿಂದ ಉಂಟಾಗುವ ನೋವನ್ನು ನಾನು ಧನಾತ್ಮಕ ಆಲೋಚನೆ ಮಾಡುವ ಮೂಲಕ ತಡೆದಿದ್ದೇನೆ ಎಂದು ಜೋಸೆಫ್​ ಕೋಬೆರ್ಲ್​ ತಿಳಿಸಿದ್ದಾರೆ. ಎರಡುವರೆ ಗಂಟೆಗಳ ಬಳಿಕ ಈತನನ್ನು ಬಾಕ್ಸ್​ನಿಂದ ಹೊರ ತೆಗೆದ ಜನರು ಹಿ ಇಸ್​​ ರಿಯಲಿ ಗ್ರೇಟ್​ ಎಂದಿದ್ದಾರೆ. ಇನ್ನು ಕೋಬೆರ್ಲ್ ತನ್ನ ರೆಕಾರ್ಡ್​ಗಳನ್ನು ತಾನೇ ಬೀಟ್​ ಮಾಡುವ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯಾಗಿದ್ದಾರೆ.

LEAVE A REPLY

Please enter your comment!
Please enter your name here