ಸುರಪುರದಲ್ಲಿ ಮಾಹಾನಾಯಕ ಧಾರಾವಾಹಿ ಬ್ಯಾನರ್ ಹಾಕಿ ಸಂಭ್ರಮಾಚರಣೆ

0

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಾಕ ಧಾರಾವಾಹಿಗೆ ಬೆಂಬಲಿಸಿ ಸುರಪುರ ನಗರದ ಬಸ್ ನಿಲ್ದಾಣ ಬಳಿಯ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಮಹಾನಾಯಕ ಬ್ಯಾನರ್ ಹಾಕಿ ಅಂಬೇಡ್ಕರ್ ಅಭಿಮಾನಿಗಳು ಸಂಭ್ರಮ ಆಚರಿಸಿದರು.

ಶುಕ್ರವಾರ ರಾತ್ರಿ ಬ್ಯಾನರ್ ಅನಾವರಣದ ಕಾರ್ಯಕ್ರಮ ನಡೆಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಅಂಬೇಡ್ಕರ್ ಅನುಯಾಯಿ ಜಗದೀಶ್ ಶಾಖನವರ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಯ ಕುರಿತು ಇಂದಿನ ಯುವ ಪೀಳಿಗೆಗೆ ಆದರ್ಶವಾಗಲೆಂದು ಝೀ ಕನ್ನಡ ವಾಹಿನಿಯಲ್ಲಿ ಮಹಾನಾಯಕ ಹೆಸರಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗೆ ಇಡೀ ಸುರಪುರ ತಾಲೂಕಿನ ಎಲ್ಲಾ ಅಂಬೇಡ್ಕರ್ ಅಭಿಮಾನಿಗಳಿಂದ ಸಂಪೂರ್ಣ ಪ್ರೋತ್ಸಾಹವಿದೆ.
ಝೀ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರಿಗೆ ಕೆಲವು ಮತಿಯವಾದಿಗಳು ಧಾರಾವಾಹಿ ಪ್ರಸಾರ ಮಾಡದಂತೆ ಬೆದರಿಕೆ ಹಾಕುತ್ತಿರುವುದಾಗಿ ಹೇಳಲಾಗುತ್ತಿದೆ.ಆದರೆ ರಾಘವೇಂದ್ರ ಹುಣಸೂರು ಅವರು ಯಾವ ಕರೆಗೂ ಪ್ರಾಮುಖ್ಯತೆ ನೀಡಬೇಕಾಗಿಲ್ಲ.ಅವರೊಂದಿಗೆ ಕೋಟ್ಯಾಂತರ ಜನ ಈ ದೇಶದ ಅಂಬೇಡ್ಕರ್ ಅನುಯಾಯಿಗಳು ಬೆಂಬಲಕ್ಕಿದ್ದೇವೆ ಎಂದರು‌.

LEAVE A REPLY

Please enter your comment!
Please enter your name here