ಸುರಿಯುವ ಜೋರು ಮಳೆಯಲ್ಲಿ ‘ಸಲಗ’ ಡ್ಯುಯೆಟ್​​

0

ಸ್ಯಾಂಡಲ್​ವುಡ್​ನಲ್ಲಿ ದುನಿಯಾ ವಿಜಿ ಸಲಗ ಸದ್ದು ಜೋರಾಗಿದೆ. ಲಾಕ್​ಡೌನ್​ ಟೈಮಲ್ಲೂ ಸಲಗ ಹವಾ ಕಮ್ಮಿಯಾಗಿಲ್ಲ. ಇದೀಗ ಸದ್ದಿಲ್ಲದೇ ಮಳೆಯ ಅಬ್ಬರದ ನಡುವೆಯೂ ಸಲಗ ಟೀಂ ರೊಮ್ಯಾಂಟಿಕ್ ಸಾಂಗ್​ ಶೂಟಿಂಗ್​ ಮಾಡಿ ಬಂದಿದೆ.

ದುನಿಯಾ ವಿಜಿ ನಿರ್ದೇಶಿಸಿ, ನಟಿಸಿರೋ ಆಯಕ್ಷನ್​ ಸಿನಿಮಾ ಸಲಗ. ಚಿತ್ರದಲ್ಲಿ ಸಂಜನಾ ಆನಂದ್​ ವಿಜಿಗೆ ಜೋಡಿಯಾಗಿದ್ದು, ಡಾಲಿ ಧನಂಜಯ ಸೇರಿದಂತೆ ದೊಡ್ಡ ತಾರಾಗಣ ಸಿನಿಮಾದಲ್ಲಿದೆ. ಟಗರು ಸಿನಿಮಾ ಖ್ಯಾತಿಯ ಕೆ. ಪಿ ಶ್ರೀಕಾಂತ್ ಸಲಗ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಲಾಕ್​ಡೌನ್​ಗೂ ಮೊದಲೇ ಸಲಗ ಚಿತ್ರದ ಶೂಟಿಂಗ್​ ಮುಗಿದಿತ್ತು. ಆದರೆ, ಈಗ ಸರ್ಕಾರದ ಮಾರ್ಗಸೂಚಿಗಳನ್ನ ಅನುಸರಿಸಿ, ಒಂದು ಹಾಡನ್ನ ಚಿತ್ರೀಕರಿಸಿದೆ ಚಿತ್ರತಂಡ. ಥೀಮ್​ಗೆ ತಕ್ಕಂತೆ ಸುರಿಯುವ ಮಳೆಯಲ್ಲಿ ಹಾಡನ್ನ ಶೂಟ್​ ಮಾಡಲಾಗಿದೆ. ಡ್ಯಾನ್ಸ್ ಮಾಸ್ಟರ್​ ಇಲ್ಲದೇ ಜೋರು ಮಳೆ, ಜಿಗಣೆ, ಕೊರೆಯುವ ಚಳಿ ನಡುವೆ ಮುಳ್ಳಯ್ಯನ ಗಿರಿ, ಸಕಲೇಶಪುರ ಸುತ್ತಾಮುತ್ತಾ ಸಾಂಗ್​ ಶೂಟಿಂಗ್​ ಮಾಡಲಾಗಿದೆ.

ಚರಣ್​ ರಾಜ್​ ಮ್ಯೂಸಿಕ್​ ಮಾಡಿರೋ ರೊಮ್ಯಾಂಟಿಕ್​ ಹಾಡಿಗೆ ದುನಿಯಾ ವಿಜಿ, ಸಂಜನಾ ಆನಂದ್ ಹೆಜ್ಜೆ ಹಾಕಿದ್ದಾರೆ. ನಾಲ್ಕೈದು ದಿನಗಳ ಕಾಲ ಸಲಗ ಸಾಂಗ್​ ಶೂಟಿಂಗ್ ಮಾಡಲಾಗಿದೆ. ಮಳೆಗೆ ಕಾದು ಕುಳಿತು ನ್ಯಾಚುರಲ್ಲಾಗಿ ಛಾಯಾಗ್ರಾಹಕ ಶಿವಸೇನ ಹಾಡನ್ನ ಸೆರೆ ಹಿಡಿದಿದ್ದಾರೆ. ಕೇವಲ 12 ಜನರ ತಂಡ ಇಡೀ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದೆ.

ಸದ್ಯ ಸಲಗ ಸಿನಿಮಾ ಕಂಪ್ಲೀಟ್​ ಆಗಿದ್ದು, ಸಿನಿಮಾ ಪ್ರದರ್ಶನಕ್ಕೆ ಅನುಮತಿ ಸಿಕ್ಕಿದ ತಕ್ಷಣ ರಿಲೀಸ್​ಗೆ ರೆಡಿಯಿದೆ. ಈ ಡ್ಯುಯೆಟ್​ ಸಾಂಗ್​ ಸಲಗ ಚಿತ್ರದ ಹೈಲೆಟ್​ಗಳಲ್ಲೊಂದು.

LEAVE A REPLY

Please enter your comment!
Please enter your name here