ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ಸದ್ಯ ಸಿಬಿಐ ಅಂಗಳದಲ್ಲಿದೆ. ಸಿಬಿಐ ಈಗಾಗಲೇ ಮುಂಬೈಗೆ ಧಾವಿಸಿದ್ದು, ಇಂದು ಬಾಂದ್ರಾ ಪೊಲೀಸ್ ಠಾಣೆಗೆ ಭೇಟಿ ಕೊಟ್ಟಿದ್ದಾರೆ.
”ಸುಶಾಂತ್ ಸಿಂಗ್ ಶವಪರೀಕ್ಷೆ ಕುರಿತು ಬೇರೆ ವೈದ್ಯರ ತಂಡದಿಂದ ಯಾಕೆ ಎರಡನೇ ಅಭಿಪ್ರಾಯ ಪಡೆಯಲಿಲ್ಲ.?” ಎಂಬುದನ್ನು ಮುಂಬೈ ಪೊಲೀಸರಿಗೆ ಸಿಬಿಐ ಪ್ರಶ್ನಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಸುಶಾಂತ್ ಶವಪರೀಕ್ಷೆ ನಡೆದಿದ್ದು, ಶವಪರೀಕ್ಷೆಯ ವರದಿಯಲ್ಲಿ ಸಾವಿನ್ನಪ್ಪಿದ ಸಮಯವನ್ನು ಉಲ್ಲೇಖಿಸಿಲ್ಲ. ಹೀಗಾಗಿ ಶವಪರೀಕ್ಷೆ ನಡೆಸಿದ ವೈದ್ಯರನ್ನೂ ಸಿಬಿಐ ವಿಚಾರಣೆಗೆ ಒಳಪಡಿಸಲಿದೆ.
ಕೆಲ ವರದಿಗಳ ಪ್ರಕಾರ, ಸುಶಾಂತ್ ಶವಪರೀಕ್ಷೆ ನಡೆಸಿದ ವೈದ್ಯರು ನಾಪತ್ತೆಯಾಗಿದ್ದಾರೆ .
ಅತ್ತ ಸುಶಾಂತ್ ಶವಪರೀಕ್ಷೆಯ ವರದಿಯನ್ನು ಮರುಪರಿಶೀಲಿಸಲು ಏಮ್ಸ್ ನ ಫೋರೆನ್ಸಿಕ್ ವಿಭಾಗದ ತಂಡಕ್ಕೆ ಸಿಬಿಐ ಸಂಪರ್ಕಿಸಿದೆ.