ಸುಶಾಂತ್ ಪ್ರಕರಣ : ಸದ್ಯದಲ್ಲೇ ಸಾರಾ, ಶ್ರದ್ಧಾ, ರಾಕುಲ್‍ಗೆ ಎನ್‍ಸಿಬಿ ನೋಟಿಸ್

0

ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್‍ಸಾವು ಪ್ರಕರಣ ಮತ್ತು ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಸಿಬಿ) ಶೀಘ್ರದಲ್ಲೇ ಬಿ-ಟೌನ್‍ನ ಕೆಲವು ತಾರೆಯರಿಗೆ ನೋಟಿಸ್ ಜಾರಿಗೊಳಿಸಲಿದೆ.

ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್, ಶ್ರದ್ಧಾಕಪೂರ್, ರಾಕುಲ್ ಪ್ರೀತ್, ಫ್ಯಾಚನ್‍ಡಿಸೈನರ್ ಕಂಬಾಟಾ ಮತ್ತುಡ್ರಗ್ಸ್ ಸೇವನೆ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವವರಿಗೆ ಶೀಘ್ರ ನೋಟಿಸ್ ಎನ್‍ಸಿಬಿ ಶೀಘ್ರ ನೋಟಿಸ್ ಜಾರಿಗೊಳಿಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿರಿಯಾ, ಸೌವಿಕ್ ಸೇರಿದಂತೆ ಈವರೆಗೆ 20 ಜನರನ್ನು ಬಂಧಿಸಲಾಗಿದ್ದು, ವಿಚಾರಣೆ ಮತ್ತಷ್ಟು ತೀವ್ರಗೊಂಡಿದೆ. ಸುಶಾಂತ್‍ಗೆಡ್ರಗ್ಸ್ ಪೂರೈಸುತ್ತಿದ್ದಆರೋಪದ ಸಂಬಂಧ ಬಂಧಿತರಾದ ಚಿತ್ರನಟಿ ರಿಯಾಚಕ್ರವರ್ತಿ ವಿಚಾರಣೆ ವೇಳೆ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ) ಅಧಿಕಾರಿಗಳ ಮುಂದೆ ಮತ್ತಷ್ಟು ಸಂಗತಿಗಳನ್ನು ಈಗಾಗಲೇ ಬಹಿರಂಗಗೊಳಿಸಿದ್ದಾರೆ.

ಈ ಬಗ್ಗೆ ತನಿಖೆ ತೀವ್ರಗೊಳಿಸಿರುವ ತನಿಖಾ ಸಂಸ್ಥೆ ಪ್ರಕರಣದಲ್ಲಿ ಹೆಸರಿಸಲ್ಪಟ್ಟಿರುವವರ ಜಾಡು ಹಿಡಿದು ತನಿಖೆ ನಡೆಸುತ್ತಿದ್ದು, ಇನ್ನೂ ಕೆಲವರು ಬಂಧನಕ್ಕೆ ಒಳಗಾಗುವ ನಿರೀಕ್ಷೆ ಇದೆ. ಸುಶಾಂತ್ ಸಾವು ಪ್ರಕರಣದಲ್ಲಿ ಡಗ್ಸ್ ಜಲದ ನಂಟು ಕೇಳಿ ಬಂದ ನಂತರತ ನಿಖೆಯ ಆಳ ಅಗೆದಷ್ಟು ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ.

LEAVE A REPLY

Please enter your comment!
Please enter your name here