ಬಾಲಿವುಡ್ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಕೈಗೆತ್ತುಕೊಮಡಿರುವ ಸಿಬಿಐ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದೆ. ಈಗಾಗಲೇ ಪ್ರಕರಣ ಸಂಬಂಧ ಹಲವರನ್ನು ವಿಚಾರಣೆಗೊಳಪಡಿಸಿರುವ ಸಿಬಿಐ ಇಂದು ಸುಶಾಂತ್ ಫ್ಲಾಟ್ ಮೇಟ್ ಹಾಗೂ ಸ್ನೇಹಿತ ಎಂದು ಹೇಳಲಾಗಿರುವ ಸಿದ್ಧಾರ್ಥ್ ಪಿಥನಿಯನ್ನು ವಿಚಾರಣೆ ನಡೆಸಲಿದೆ.
ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಮೊದಲು ನೋಡಿದವರು ಅಂದ್ರೆ ಅದು ಸಿದ್ಧಾರ್ಥ್. ಹೀಗಾಗಿ ಸಹಜವಾಗಿಯೇ ಪ್ರಕರಣದ ಪ್ರಮುಖ ಸಾಕ್ಷಿ ಕೂಡ ಆಗಿದ್ದಾರೆ. ಜೂನ್ 13 ಹಾಗೂ 14ರಂದು ರಾತ್ರಿ ಸುಶಾಂತ್ ಮನೆಯಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿ ಸಿಬಿಐ ಸಿದ್ಧಾರ್ಥ್ನನ್ನುವಿಚಾರಣೆಗೊಳಪಡಿಸಲಿದೆ. ಅಷ್ಟೇ ಅಲ್ಲದೇ ಘಟನೆ ನಡೆದಾಗ ಸುಶಾಂತ್ ಮನೆಯಲ್ಲಿದ್ದ ಅಡುಗೆ ಕೆಲಸ ಮಾಡುತ್ತಿದ್ದವನನ್ನೂ ಸಹ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ತಿಳಿಸಿದೆ.