ಸೆನ್ಸೆಕ್ಸ್ 304, ನಿಫ್ಟಿ 76 ಪಾಯಿಂಟ್ ಹೆಚ್ಚಳ; ಟೈಟಾನ್ ಟೈಮ್ ಸೂಪರ್

0

ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ 50 ಬುಧವಾರದಂದು (ಅಕ್ಟೋಬರ್ 7, 2020) ದಾಖಲು ಮಾಡಿವೆ. ಸೆನ್ಸೆಕ್ಸ್ 304.38 ಪಾಯಿಂಟ್ ಗಳ ಏರಿಕೆಯನ್ನು ದಾಖಲಿಸಿ, ದಿನದ ಕೊನೆಗೆ 39,878.95 ಪಾಯಿಂಟ್ ಜತೆಗೆ ವಹಿವಾಟನ್ನು ಮುಗಿಸಿದೆ. ಇನ್ನು ನಿಫ್ಟಿ 50 ಸೂಚ್ಯಂಕವು 76.50 ಪಾಯಿಂಟ್ ಹೆಚ್ಚಳವಾಗಿ, 11,738.90 ಪಾಯಿಂಟ್ ತಲುಪಿದೆ.

ಆದರೆ, ಹೂಡಿಕೆದಾರರಲ್ಲಿ ಈಗಲೂ ಯುಎಸ್ ಅಧ್ಯಕ್ಷೀಯ ಚುನಾವಣೆ ಹಾಗೂ ಎರಡನೇ ಹಂತದ ಆರ್ಥಿಕ ಪ್ಯಾಕೇಜ್ ಘೋಷಣೆ ಬಗ್ಗೆ ನಿರೀಕ್ಷೆ ಇದ್ದೇ ಇದೆ.

ಬಿಲ್ ಇಲ್ಲದ ನಿಮ್ಮ ಬಳಿಯ ಚಿನ್ನ ಮಾರಾಟ ಮಾಡೋದು ಹೇಗೆ?

ವಾಹನ, ಮೂಲಸೌಕರ್ಯ, ಮಾಹಿತಿ ಮತ್ತು ತಂತ್ರಜ್ಞಾನ, ಎಫ್ ಎಂಸಿಜಿ ವಲಯಗಳ ಷೇರುಗಳು ಏರಿಕೆಯಲ್ಲೇ ವ್ಯವಹಾರ ಮುಕ್ತಾಯಗೊಳಿಸಿವೆ. ಲೋಹ, ಫಾರ್ಮಾ, ಎನರ್ಜಿ ವಲಯದಲ್ಲಿ ಮಾರಾಟದ ಒತ್ತಡ ಕಂಡುಬಂತು. ಬಿಎಸ್ ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಇಳಿಕೆಯಲ್ಲೇ ವಹಿವಾಟು ಮುಗಿಸಿದವು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್

ಟೈಟಾನ್ ಕಂಪೆನಿ 4.50%

ಬಜಾಜ್ ಆಟೋ 3.54%

ಹೀರೋ ಮೋಟೋ ಕಾರ್ಪ್ 3.10%

ಮಾರುತಿ ಸುಜುಕಿ 2.24%

ರಿಲಯನ್ಸ್ 2.13%

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್

ಬಜಾಜ್ ಫೈನಾನ್ಸ್ 4.12%

ಬಿಪಿಸಿಎಲ್ 2.78%

ಟಾಟಾ ಮೋಟಾರ್ಸ್ 2.59%

ಹಿಂಡಾಲ್ಕೋ 2.29%

ಪವರ್ ಗ್ರಿಡ್ ಕಾರ್ಪೊರೇಷನ್ 2.21%

LEAVE A REPLY

Please enter your comment!
Please enter your name here