ಭಾರತೀಯ ಷೇರುಪೇಟೆಯಲ್ಲಿ ಮಂಗಳವಾರ ದಿನದ ಅಂತ್ಯಕ್ಕೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ನಲ್ಲಿ 600.87 (ಶೇ. 1.54) ಅಂಶ ಏರಿಕೆ ಆಗಿದ್ದು 39,574.57ರಲ್ಲಿ ದಿನದ ವಹಿವಾಟು ಮುಗಿದಿದೆ. ಏಳು ತಿಂಗಳ ಅವಧಿಯಲ್ಲಿ ಕಂಡ ಗರಿಷ್ಠ ಏರಿಕೆಯ ದಾಖಲೆಯಾಗಿದೆ. ಇದೇ ರೀತಿ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ಸೂಚ್ಯಂಕ ನಿಫ್ಟಿಯಲ್ಲಿ 159.05 ಪಾಯಿಂಟ್ (ಶೇ. 1.38) ಹೆಚ್ಚಳ ಉಂಟಾಗಿದ್ದು, 11,662.40ರಲ್ಲಿ ದಿನದ ವಹಿವಾಟು ಕೊನೆಗೊಂಡಿದೆ.
ಸೆನ್ಸೆಕ್ಸ್ ಪಟ್ಟಿಯಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ಶೇ. 8 ಲಾಭ ಗಳಿಸಿದೆ. ಉಳಿದಂತೆ ಇಂಡಸ್ ಇಂಡ್ ಬ್ಯಾಂಕ್, ಮಹಿಂದ್ರಾ ಆಂಡ್ ಮಹಿಂದ್ರಾ, ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಸಂಸ್ಥೆಗಳು ಲಾಭ ದಾಖಲಿಸಿವೆ. ಟಾಟಾ ಸ್ಟೀಲ್, ನೆಸ್ಲೆ, ಎಲ್ ಆಂಡ್ ಟಿ, ಸನ್ ಫಾರ್ವ, ಎನ್ಟಿಪಿಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗಳು ನಷ್ಟ ಅನುಭವಿಸಿವೆ.
ಇದನ್ನು ಓದಿ: ಡೆನ್ಮಾರ್ಕ್ ಓಪನ್‌ನಿಂದ ಹಿಂದೆ ಸರಿದ ಗಂಡ-ಹೆಂಡತಿ! ಜನವರಿವರೆಗೆ ಕಣಕ್ಕಿಳಿಯಲ್ಲ
ದೆಹಲಿ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಕಂಡಿದೆ. ಚಿನ್ನದ ಬೆಲೆಯಲ್ಲಿ 454 ರೂಪಾಯಿ ಏರಿಕೆಯಾಗಿದೆ. ಪರಿಣಾಮ 10 ಗ್ರಾಂ ಚಿನ್ನದ ಬೆಲೆ 51,425 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆಯಲ್ಲೂ 751 ರೂಪಾಯಿ ಹೆಚ್ಚಳವಾಗಿದ್ದು, ಕಿಲೋ ಬೆಳ್ಳಿಯ ಬೆಲೆ 63,127 ರೂಪಾಯಿ ತಲುಪಿದೆ. ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 17 ಪೈಸೆ ಕುಸಿದಿದ್ದು, 73.46 ರೂಪಾಯಿಯಲ್ಲಿ ವಹಿವಾಟು ಮುಗಿಸಿದೆ. (ಏಜೆನ್ಸೀಸ್)