ಸೆ.21 ರಿಂದ ಶಾಲೆಗಳು ಆರಂಭ – ತರಗತಿಗಳು ಮಾತ್ರ ಪ್ರಾರಂಭ ಇಲ್ಲ.

0

ಸೆ.21 ರಿಂದ ಶಾಲೆಗಳು ಆರಂಭ – ತರಗತಿಗಳು ಮಾತ್ರ ಪ್ರಾರಂಭ ಇಲ್ಲ.
÷÷÷÷÷÷÷÷÷÷÷÷÷÷÷÷÷÷
C.N.R

ಮೈಸೂರು, ಸೆ.18 : ಶಾಲೆಗಳು ಆರಂಭವಾಗುವ ಬಗ್ಗೆ ಶಿಕ್ಷಣ ಸಚಿವ ಸುರೇಶ ಕುಮಾರ ಅವರು ಈ ಕುರಿತು ಮಾಹಿತಿ ನೀಡಿದ್ದು, ಕೇಂದ್ರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಸೆ.21ರಿಂದ ಶಾಲೆಗಳು ಆರಂಭವಾಗಲಿದೆ.

ಆದರೆ ತರಗತಿಗಳು ನಡೆಯುವುದಿಲ್ಲ. ಬದಲಾಗಿ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ಸೆ.21ರಿಂದ 9ರಿಂದ 12ನೇ ತರಗತಿ ಆರಂಭವಾಗಲಿದೆ ಎಂದು ಕೇಂದ್ರ ಸರಕಾರದ ಅನ್ ಲೈಕ್ 4.0 ದಲ್ಲಿ ತಿಳಿಸಲಾಗಿತ್ತು. ಪಾಲಕರ ಲಿಖಿತ ಒಪ್ಪಿಗೆ ಪತ್ರ ಪಡೆದು ಶಾಲೆಗಳನ್ನು ನಡೆಸುವಂತೆ ತಿಳಿಸಲಾಗಿತ್ತು. ಆದರೆ ರಾಜ್ಯ ಸರಕಾರದ ಪ್ರಕಾರ ತರಗತಿಗಳು ಆರಂಭವಾಗುವುದಿಲ್ಲ.

ಸೆ.21ರಿಂದ ತಿಂಗಳಾಂತ್ಯದವರೆಗೆ ಪ್ರವೇಶ ಪ್ರಕ್ರಿಯೆ ನಡೆಸಬೇಕು. 1ರಿಂದ 10ನೇ ತರಗತಿವರೆಗಿನ ಎಲ್ಲ ಪ್ರವೇಶ ಪ್ರಕ್ರಿಯೆಗಳನ್ನು ಈ ಅವಧಿಯಲ್ಲೇ ಮುಗಿಸಬೇಕು. ಕೇವಲ ಒಂದೇ ಸೆಮಿಸ್ಟರ್ ಫೀ ಮಾತ್ರ ಪಡೆಯಬೇಕು ಎಂದು ತಿಳಿಸಿದ್ದಾರೆ.
ತರಗತಿಗಳನ್ನು ಆರಂಭಿಸುವ ಕುರಿತು ಇಲಾಖೆ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ.ಈ ತಿಂಗಳಾಂತ್ಯದ ನಂತರ ಈ ಕುರಿತು ನಿರ್ಧಾರ ಪ್ರಕಟಿಸಬಹುದು. ಹಂತಹಂತವಾಗಿ ಪರಿಸ್ಥಿತಿ ನೋಡಿಕೊಂಡು ಕ್ರಮ ತೆಗೆದುಕೊಳ್ಳಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಸಧ್ಯಕ್ಕಂತೂ ಮಕ್ಕಳನ್ನು ತರಗತಿಗಳಿಗಾಗಿ ಶಾಲೆಗೆ ಕರೆಸುವಂತಿಲ್ಲ ಎನ್ನುವುದು ಸ್ಪಷ್ಟವಾದಂತಾಗಿದೆ. ರಾಜ್ಯದಲ್ಲಿ ಜೂನ್ 8ರಿಂದಲೇ ಶಾಲೆಗಳು ತೆರೆದಿವೆ. ಶಿಕ್ಷಕರು ಶಾಲೆಗೆ ಹೋಗುತ್ತಿದ್ದಾರೆ. ಈ ಮಧ್ಯೆ ವಿದ್ಯಾಗಮನ ಎನ್ನುವ ಯೋಜನೆಯೂ ನಡೆಯುತ್ತಿದೆ.

LEAVE A REPLY

Please enter your comment!
Please enter your name here