ಸೊರಟೂರು : ಗ್ರಾಮ ಪಂಚಾಯಿತಿಯಲ್ಲಿ ಕೊರೊನಾ ಸುರಕ್ಷತೆಯ ಸಭೆ…!

0

ಗದಗ :ಸೊರಟೂರು ಗ್ರಾಮದಲ್ಲಿ ಈಗಾಗಲೇ ಮೂರು ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದು ಸೋಂಕು ನಿಯಂತ್ರಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿಯಲ್ಲಿ ಸಭೆಯನ್ನು ನೆರವೇರಿಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಂಚಾಯಿತಿ ಆಡಳಿತ ಅಧಿಕಾರಿಯಾಗಿರುವ ಮಲ್ಲಯ್ಯ ಕೊರವನವರ ಮಾತನಾಡಿ
ಸೋಂಕು ಕಾಣಿಸಿಕೊಂಡಿರುವ ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಮಾಡಲಾಗಿದೆ ಹಾಗೂ ಕಂಟೈನ್ಮೆಂಟ್ ಪ್ರದೇಶದಲ್ಲಿರುವ ಕಡು ಬಡವರಿಗೆ ಆಹಾರ ಕಿಟ್ಟನ್ನು ವಿತರಿಸಿದ್ದೇವೆ ಇಂತಹ ಪ್ರದೇಶದಲ್ಲಿ ಯಾವುದೇ ಮೂಲಭೂತ ಸೌಕರ್ಯ ಕೊರತೆ ಆಗದ ಹಾಗೆ ಕಾರ್ಯನಿರ್ವಹಿಸಲು ಸಿಬ್ಬಂದಿಗಳಿಗೆ ತಿಳಿಸಲಾಗಿದೆ .
ಸಂಪೂರ್ಣ ಗ್ರಾಮವನ್ನು ಸ್ಯಾನಿಟೈಸರ್ ಮಾಡಲಾಗುವುದು ಗ್ರಾಮದಲ್ಲಿರುವ ನೀರಿನ ಟ್ಯಾಂಕ್ ಹಾಗೂ ಸಿಸ್ಟನ್ಗಳಿಗೆ ಸ್ವಚ್ಛತೆ ಗೊಳಿಸಿ ಕ್ಲೋರಿನೇಷನ್ ಮಾಡಲಾಗುವುದು.
ಗ್ರಾಮದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುವುದು ಕಂಡು ಬಂದಿರುವುದರಿಂದ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ತಿಳಿಸಲಾಗಿದೆ ಕೊರೋನಾ ಸೋಂಕು ಹರಡದ ಹಾಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿವಳಿಕೆ ನೀಡಲಾಗಿದೆ ಮತ್ತು ಕೊರೋನಾ ವಾರಿಯರ್ಸ್ ಆಗಿರುವಂತಹ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸುರಕ್ಷತೆಗಾಗಿ ಏನ್ 95 ಮಾಸ್ಕ್ ಹಾಗೂ ಸ್ಯಾನಿಟೈಸರ್ ಕೊಡಲು ಆರೋಗ್ಯ ಇಲಾಖೆ ಹಾಗೂ ದಾನಿಗಳಿಗೆ ಮಾತನಾಡಿದ್ದೇವೆ ಶೀಘ್ರದಲ್ಲಿ ಒದಗಿಸಲಾಗುವುದು
ಪ್ರತಿಯೊಬ್ಬರ ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರು ಮಾಸ್ಕ್ ಹಾಕದೆ ಓಡಾಡುವವರಿಗೆ ಒಂದು ನೂರು ರೂಪಾಯಿ ದಂಡ ವಿಧಿಸಿ ಒಂದು ಮಾಸ್ಕ್ ಕೊಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು .
ನಂತರ ಮಾತನಾಡಿದ ಪಿಡಿಒ ಮಾಲತೇಶ್ ಗ್ರಾಮದ ಸಾರ್ವಜನಿಕರು ಓಡಾಡುವ ಹಾಗೂ ವಾಸಿಸುವ ಪ್ರದೇಶದ ಸುತ್ತಮುತ್ತ ಕೊಳಚೆ ಹಾಗೂ ಮಲಿನವಾದ ನೀರು ನಿಂತಿರುವುದು ಕಂಡು ಬಂದಲ್ಲಿ ಕೊರೋನಾ ವಾರಿಯರ್ಸ್ ಆಗಲಿ ಅಥವಾ ಸಾರ್ವಜನಿಕರಾಗಲಿ ಫೋನ್ ಕರೆ ಅಥವಾ ವಾಟ್ಸಾಪ್ ಸಂದೇಶದ ಮೂಲಕವಾಗಲಿ ವಿಷಯ ತಿಳಿಸಿದರೆ ತಕ್ಷಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಆರೋಗ್ಯ ಇಲಾಖೆಯ ಡಾ. ಸಾಯಿಪ್ರಕಾಶ್ ಮಡಿವಾಳರ್ ಹಾಗೂ ಸಿಬ್ಬಂದಿಗಳು ಶಾಲಾ ಮುಖ್ಯ ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತೆಯರು. ಗ್ರಾಮೀಣ ಗ್ರಂಥಾಲಯದ ಗ್ರಂಥ ಪಾಲಕರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here