ಸೋಶಿಯಲ್​ ಮೀಡಿಯಾದಲ್ಲಿ ಹೊಸ ದಾಖಲೆ ಬರೆದ ಮುಂಬೈ ಇಂಡಿಯನ್ಸ್..!

0

ಸದ್ಯ ಕ್ರಿಕೆಟ್​ ಪ್ರೇಮಿಗಳ ಚಿತ್ತ ಮಿಲಿಯನ್​ ಡಾಲರ್​ ಟೂರ್ನಿ ಐಪಿಎಲ್​​​​​ನತ್ತ ನೆಟ್ಟಿದೆ. ಭಾರತದಲ್ಲಿ ಕಿಲ್ಲರ್​ ಕೊರೊನಾ ವೈರಸ್​ ಹಾವಳಿಯಿಂದಾಗಿ, ಈ ಬಾರಿಯ ಐಪಿಎಲ್​​ ಟೂರ್ನಿಗೆ ಯುಎಇ ಆತಿಥ್ಯವಹಿಸುತ್ತಿದೆ. ಎಲ್ಲಾ ತಂಡಗಳು ಮರಳುಗಾಡಿನ ನಾಡಿನಲ್ಲಿ ಟ್ರೋಪಿ ಎತ್ತಿ ಹಿಡಿಯಲು ತಮ್ಮದೇ ಆದ ರಣತಂತ್ರ ರೂಪಿಸುತ್ತಿವೆ. ಆದ್ರೆ, ಟೂರ್ನಿ ಆರಂಭಕ್ಕೂ ಮೊದಲೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​, ಸೋಶಿಯಲ್​ ಮೀಡಿಯಾದಲ್ಲಿ ಮಹತ್ವದ ಮೈಲಿಗಲ್ಲು ತಲುಪಿದೆ.

ಇನ್ಸ್​​​ಟಾಗ್ರಾಮ್​​​ನಲ್ಲಿ ಮುಂಬೈ ಇಂಡಿಯನ್ಸ್​ಗೆ 50 ಲಕ್ಷ ಫಾಲೋವರ್ಸ್..! ಐಪಿಎಲ್​ನಲ್ಲಿ ಅತಿಹೆಚ್ಚು ಫ್ಯಾನ್ಸ್ ಫಾಲೋಯಿಂಗ್ ಹೊಂದಿರುವ ತಂಡಗಳ ಪೈಕಿ ಮುಂಬೈ ಇಂಡಿಯನ್ಸ್, ಕೂಡ ಒಂದಾಗಿದೆ. ಇನ್ಸ್​ಟಾಗ್ರಾಮ್​​​​ನಲ್ಲಿ ಮುಂಬೈ ಇಂಡಿಯನ್ಸ್,​ 5 ಮಿಲಿಯನ್​ ಫಾಲೋವರ್ಸ್​ ಹೊಂದುವ ಮೂಲಕ ಹೊಸ ದಾಖಲೆ ಬರೆದಿದೆ. ಆ ಮೂಲಕ 5 ಇನ್ಸ್​ಟಾಗ್ರಾಂನಲ್ಲಿ ಮಿಲಿಯನ್​ ಫಾಲೋವರ್ಸ್ ಹೊಂದಿರುವ ಮೊದಲ ಐಪಿಎಲ್​ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈ ನಂತರದ ಸ್ಥಾನದಲ್ಲಿ 4.8 ಮಿಲಿಯನ್​ ಫಾಲೋವರ್ಸ್ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್, 40 ಲಕ್ಷ ಫಾಲೋವರ್ಸ್​ ಹೊಂದಿರುವ ಆರ್​ಸಿಬಿ, ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದಿವೆ.

LEAVE A REPLY

Please enter your comment!
Please enter your name here