ಸ್ಟಾರ್ಚ್ ಮಿಲೇನಿಯಂ ಪ್ರೈ,ಲಿ,ಕಂಪನಿ ನಿರ್ದೇಶಕ ಶಿವಕುಮಾರ ಸವದಿ ಅವರಿಂದ ಅಥಣಿ ಪತ್ರಕರ್ತರಿಗೆ ಕೊರೊನಾ ಸೊಂಕು ತಡೆಗಟ್ಟುವ ಸಲಕರಣೆ ವಿತರಣೆ

0

ಸ್ಟಾರ್ಚ್ ಮಿಲೇನಿಯಂ ಪ್ರೈ,ಲಿ,ಕಂಪನಿ ನಿರ್ದೇಶಕ ಶಿವಕುಮಾರ ಸವದಿ ಅವರಿಂದ ಅಥಣಿ ಪತ್ರಕರ್ತರಿಗೆ ಕೊರೊನಾ ಸೊಂಕು ತಡೆಗಟ್ಟುವ ಸಲಕರಣೆ ವಿತರಣೆ

ಅಥಣಿ: ತಾಲೂಕಿನ ಕೊರೊನಾ ಮಹಾಮಾರಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ, ಪ್ರಧಾನಿ ನರೇಂದ್ರ ಮೋದಿ ಅವರು ಪತ್ರಕರ್ತರು ಕೂಡ ಕೊರೊನಾ ವಾರಿಯರ್ಸ್ ಎಂದು ಅಭಿಪ್ರಾಯಪಟ್ಟಿದ್ದಾರೆ, ಈ ಸೋಂಕಿನಿಂದ ಆದಷ್ಟು ಮಟ್ಟಿಗೆ ರಕ್ಷಿಸಿಕೊಳ್ಳಲು ಅಥಣಿ ಪಟ್ಟಣದ ಖ್ಯಾತ ಉದ್ಯಮಿ ಶಿವಕುಮಾರ್ ಸವದಿ ತಾಲೂಕಿನ ವರದಿಗಾರಿಗೆ ಸೊಂಕು ತಡೆಗಟ್ಟುವ ಸಲಕರಣೆ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕೊರೊನಾ ಅಬ್ಬರ ಹೆಚ್ಚಾಗಿದೆ,  ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ ಜಿಲ್ಲಾ ತಾಲೂಕು ಅಧಿಕಾರಿಗಳು ಹಗಲು-ರಾತ್ರಿಯೆನ್ನದೆ ಕೊರೊನಾ ವಾರಿಯರ್ಸ್ಗಳಾಗಿ ಕಾರ್ಯ ಪ್ರವೃತ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಜೋತೆಗೆ ಪತ್ರಿಕಾರಂಗ ಜನರನ್ನು ಎಚ್ಚರಿಸುವುದರ ಜೊತೆಗೆ, ಸತತವಾಗಿ ವರದಿ ಮಾಡುತ್ತ, ಅದರಲ್ಲೂ ಕೊರೊನಾ ಸೋಂಕಿತರಿರುವ  ಸ್ಥಳದಲ್ಲಿ ಹೋಗಿ ವರದಿಗಾರರು ಸಮಾಜಗೋಸ್ಕರ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ನಮ್ಮ ರೀತಿಯಲ್ಲಿ ಕುಟುಂಬಗಳು ಇರುವುದರಿಂದ ಅವರ ಆರೋಗ್ಯ ಸುರಕ್ಷತೆ ಅತಿಮುಖ್ಯ ಇದರಿಂದ ನಮ್ಮ ಮಿಲೇನಿಯಮ್ ಸ್ಟಾರ್ಚ ಸಂಸ್ಥೆಯಿಂದ ಆದಷ್ಟು ಮಟ್ಟಿಗೆಪತ್ರಕರ್ತರಿಗೆ ಸೋಂಕು ತಡೆಗಟ್ಟುವ ಸಲಕರಣೆ ಮಾಸ್ಕ ಸ್ಯಾನಿಟೈಜರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಈ ವೇಳೆ ಮಿಲೆನಿಯಂ ಸ್ಟಾರ್ಚ್ ,ವ್ಯವಸ್ಥಾಪಕನಿರ್ದೇಶಕ ನಿಖಿಲ್ ಪಾಟೀಲ್,  ಮ್ಯಾನೇಜರ್ ವಿಜಯ ಹಿರೇಮಠ , ಎಚ್,ಆರ್,ಎ, ಸಂತೋಷ್ ಹತ್ತಿ, ಅಡ್ಮಿನಿಸ್ಟ್ರೇಟಿವ್ ಮ್ಯಾನೇಜರ್, ಸಿದ್ದು ಹೊನವಾಡಮಠ, ಎಚ್ಆರ್, ಆಸಿಫ್ ತಾಂಬೋಳಿ, ಡಿ, ಆಯ್, ಬಸು ಗುಗವಾಡ, ಕಾರ್ಮಿಕ ಗುತ್ತಿಗೆದಾರರು, ಮಹಾದೇವ್ ಯಲ್ಲಟ್ಟಿ , ಆಫೀಸ್ ಬಾಯ್,ಮುಂತಾದವರು ಉಪಸ್ಥಿತರಿದ್ದರು.

ಬೈಟ್_ ಶಿವಕುಮಾರ್ ಸವದಿ,

ವರದಿ :ಡಾ.ಆರ್ ಎಸ್ ದೊಡ್ಡನಿಂಗಪ್ಪಗೋಳ ಅಥಣಿ.

LEAVE A REPLY

Please enter your comment!
Please enter your name here