ಬಿಹಾರದ ಗಯಾ ಜಿಲ್ಲೆಯ ವ್ಯಕ್ತಿಯೊಬ್ಬರು 20 ವರ್ಷಗಳಲ್ಲಿ 5 ಕಿ.ಮೀ ಉದ್ದದ ಕಾಲುವೆಯನ್ನು ಅಗೆದು ತಮ್ಮ ಹೊಲಗಳಿಗೆ ನೀರಾವರಿ ಒದಗಿಸಿರೋದು ಈಗ ಎಲ್ಲರ ಮೆಚ್ಚುಗೆ ಗೆ ಪಾತ್ರವಾಗಿದೆ.
ಗಯಾ, ಇಮಾಮ್‌ಗಂಜ್ ಮತ್ತು ಬ್ಯಾಂಕೆ ಬಜಾರ್ ಬ್ಲಾಕ್‌ನ ಗಡಿಯಲ್ಲಿರುವ ಕೋತಿಲ್ವಾ ಗ್ರಾಮದವರಾದ ಲೌಂಗಿ ಭುಯಾನ್ ಎಂಬುವರು ಈ ಸಾಧನೆ ಮಾಡಿದ್ದಾರೆ. ಈಗ 3,000 ಕ್ಕೂ ಹೆಚ್ಚು ರೈತರು ವಾಸಿಸುವ ಕೋತಿಲ್ವಾ ಗ್ರಾಮ ಈ ಕಾಲುವೆಯಿಂದ ನೀರನ್ನು ಪಡೆಯುತ್ತಿದೆ. ಈ ಮನುಷ್ಯನ ಅಸಾಧಾರಣ ಸಾಧನೆಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. ಕೃಷಿಯನ್ನು ಹೊರತುಪಡಿಸಿ ಯಾವುದೇ ಉದ್ಯೋಗದ ಮಾರ್ಗಗಳಿಲ್ಲದ ಕಾರಣ, ಹೆಚ್ಚಿನ ಸಂಖ್ಯೆಯ ಹಳ್ಳಿಯ ಯುವಕರು ಜೀವನೋಪಾಯಕ್ಕಾಗಿ ದೊಡ್ಡ ನಗರಗಳಿಗೆ ವಲಸೆ ಬಂದರು. ತನ್ನ ಗ್ರಾಮದಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳನ್ನು ಬಿಟ್ಟು ಹೋಗಿದ್ದಾರೆ ಎಂದು ಭೂಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.