ಸ್ವಂತ ಹಣದಿಂದ ರಸ್ತೆ ನಿರ್ಮಾಣ ಮಾಡಿಕೊಂಡ ನಾಗರೀಕರು…!ಹೇಗಿದ್ದ ರಸ್ತೆ ಹೇಗಾಗಿದೆ ಗೊತ್ತಾ…?

0

ಚೌಡೇಶ್ವರಿ ನಗರ 13 ನೇ ವಾರ್ಡ್ನ ಚೌಡೇಶ್ವರಿ ದೇವಾಲಯದ ರಸ್ತೆ ಹಾಗೂ dgmp college ಅದಕ್ಕೆ ಹೊಂದಿಕೊಂಡಿರುವ NH75 ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸುಮಾರು ವರ್ಷಗಳಿಂದ ಹದಗೆಟ್ಟಿದ್ದು ಮಳೆ ಬಂದರೆ ಓಡಾಡಲು ಬಹಳ ತೊಂದರೆ ಆಗುತ್ತಿತ್ತು. ಇದು ಇಲ್ಲಿನ ನಿವಾಸಿಗಳಿಗೆ ಬಹಳ ಸಮಸ್ಯೆ ಆಗಿತ್ತು. ಇದನ್ನು ಗಮನಿಸಿ ಬಡಾವಣೆಯ ಯುವಕರು ಕ್ಷೇತ್ರದ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಸಮಸ್ಯೆಯನ್ನು ವಿವರಿಸಿದರೂ ಯಾರೂ ಸಹ ಸಹಕರಿಸಲಿಲ್ಲ. ಇದರಿಂದ ಬೇಸತ್ತ ಯುವಕರು ತಮ್ಮ ಸಂಪಾದನೆಯಲ್ಲಿ ಸ್ವಲ್ಪ ಸ್ವಲ್ಪ ಹಣ ತೊಡಗಿಸಿ ರಸ್ತೆಗಳನ್ನು ಅಭಿವೃದ್ಧಿ ಗೊಳಿಸಿದ್ದಾರೆ.ಇದನ್ನು ಗಮನಿಸಿ ಬಡಾವಣೆಯ ವೃದ್ಧರೂ ತಮ್ಮ ವೃದ್ಧಾಪ್ಯ ವೇತನದ ಹಣವನ್ನು ನೀಡಿ ರಸ್ತೆ ಅಭಿವೃದ್ಧಿಗೆ ಸಹಕರಿಸಿದರೇ ವಿನಃ ಯಾವುದೇ ಜನಪ್ರತಿನಿಧಿಗಳು ತಿರುಗಿಯೂ ನೋಡಲಿಲ್ಲ.
ಇಂತಿ
ಚೌಡೇಶ್ವರಿ ನಗರದ ನಿವಾಸಿಗಳು

ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಇದನ್ನು ಯಾವಾಗ ಆ ರಸ್ತೆ ಸರಿ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗುತ್ತದೆ

LEAVE A REPLY

Please enter your comment!
Please enter your name here