ಸ್ವಾತಂತ್ರ್ಯಕ್ಕೆ 74 ಭರ್ತಿ ಆಯ್ತು. ಮುಂದಿನ ವರ್ಷ 75ರ ಸಂಭ್ರಮ.

0

ಸ್ವಾತಂತ್ರ್ಯಕ್ಕೆ 74 ಭರ್ತಿ ಆಯ್ತು. ಮುಂದಿನ ವರ್ಷ 75ರ ಸಂಭ್ರಮ. ನಮ್ಮ ಪಾಲಿಗೆ ಎಲ್ಲ ಹಬ್ಬಗಳಿಗಿಂತಲೂ ಹೃದಯಕ್ಕೆ ಹತ್ತಿರವಾದ ಹಬ್ಬ ಸ್ವಾತಂತ್ರ್ಯದ ಹಬ್ಬವೇ. ಹೀಗಾಗಿ ಇಡಿಯ ವರ್ಷ ಅದನ್ನು ಭಿನ್ನ-ಭಿನ್ನ ಕಾರ್ಯಕ್ರಮಗಳ ಮೂಲಕ ಆಚರಿಸುತ್ತೇವೆ. ಅದರ ಅಂಗವಾಗಿಯೇ ಇಂದು ಈ ಲೋಗೊ ಬಿಡುಗಡೆಯಾಗುತ್ತಿದೆ.

ಮೇಲ್ನೋಟಕ್ಕೆ ಇದು ಚರಕದ ಚಕ್ರ – ಶಾಂತಿಯ ಸಂಕೇತ‌. ಆದರೆ, ಒಳಗಿರುವ ಕಡ್ಡಿಗಳೆಲ್ಲ ಸಾಮಾನ್ಯವಲ್ಲ, ಬಂದೂಕುಗಳೇ. ಇವೆರಡನ್ನೂ ಮಧ್ಯಕ್ಕೆ ಹಿಡಿದು ನಿಂತಿರುವ ಬಿಳಿಯ ಚುಕ್ಕಿ ಜ್ಞಾನದ, ಆಧ್ಯಾತ್ಮದ ಸಂಕೇತ. ಕೃಷ್ಣ ಸುದರ್ಶನ ಚಕ್ರವನ್ನು ದುಷ್ಟ ಶಿಕ್ಷಣಕ್ಕೆ ಅಂತ ಹಿಡಿದಿದ್ದು. ಅಶೋಕ ಧರ್ಮದ ಲಾಂಛನವಾಗಿ ಬಳಸಿದ್ದೂ ಅದೇ ಚಕ್ರವನ್ನು. ಭಾರತೀಯ ಪರಂಪರೆಯಲ್ಲಿ ಚಕ್ರೀಯ ಗತಿಗೆ ಅಪಾರವಾದ ಬೆಲೆಯಿದೆ. ಈ ದೃಷ್ಟಿಯಿಂದಲೇ ನಿರಂತರ ಚಲನೆಯ ಕಲ್ಪನೆ ಇಟ್ಟುಕೊಂಡು ಈ ಲೋಗೊ ರಚಿಸಲಾಗಿದೆ.

ಸ್ವರಾಜ್ಯದ ಉತ್ಕಂಠಿತ ಘೋಷಣೆಯನ್ನು ಮಾಡಿದವರು ತಿಲಕರು. ಅದನ್ನು 1947ರಲ್ಲಿ ನಾವು ಪಡೆದೆವು. ಈ ವರ್ಷ ಸ್ವರಾಜ್ಯಕ್ಕೆ ಮುಕ್ಕಾಲು ನೂರರ ಸಂಭ್ರಮವಾದ್ದರಿಂದ ‘ಸ್ವರಾಜ್ಯಕ್ಕೆ ಮುಕ್ಕಾಲ್ನೂರು’ ಎಂದೇ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಈ ಸ್ವರಾಜ್ಯವನ್ನು ಸುರಾಜ್ಯವಾಗಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದೂ ಇರುವುದರಿಂದ ಜೊತೆಯಾಗೋಣ. ರಾಷ್ಟ್ರದ ಗೌರವ ರಕ್ಷಣೆಯಲ್ಲಿ ಜೀವ ತೇಯೋಣ.
#ಸ್ವರಾಜ್ಯಕ್ಕೆ_ಮುಕ್ಕಾಲ್ನೂರು
#ಯುವಾಬ್ರಿಗೇಡ್
#ಸೋದರಿನಿವೇದಿತಾಪ್ರತಿಷ್ಠಾನ

LEAVE A REPLY

Please enter your comment!
Please enter your name here