ಸಮದ್ರದಲ್ಲಿ ಹಡಗು ಚಲಿಸುತ್ತಿರುವಾಗಲೇ ಹಡಗಿನ ಕ್ಯಾಪ್ಟನ್ ಮೃತಪಟ್ಟಿದ್ದಾರೆ.
ಪಾಟ್ನಾ ಮೂಲದ ವಿಜೇಂದ್ರಕುಮಾರ ಸಿಂಗ್(45) ಮೃತರು. ಮರಣೋತ್ತರ ಪರೀಕ್ಷೆಗಾಗಿ ಕ್ಯಾಪ್ಟನ್ ಮೃತ ದೇಹವನ್ನು ಕಾರವಾರ ಕ್ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
‘ಗ್ಲೋಬಲ್ ಲೇಡಿ’ ಹೆಸರಿನ ವಾಣಿಜ್ಯ ಹಡಗು ಚೆನ್ನೈನಿಂದ ದುಬೈಗೆ ಹೊರಟಿತ್ತು. ಈ ಹಡಗಿನಲ್ಲಿದ್ದ ಕ್ಯಾಪ್ಟನ್ ವಿಜೇಂದ್ರಕುಮಾರ ಸಿಂಗ್ ಅವರಿಗೆ ಶನಿವಾರ ಸಮುದ್ರ ಮಧ್ಯೆ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಅಸುನೀಗಿದರು.
ಕಾರವಾರ ಬಂದರಿಗೆ ಆಗಮಿಸಿದ ಹಡಗು ಲಂಗರು ಹಾಕಿದೆ. ಸ್ಥಳಕ್ಕೆ ಕಾರವಾರ ಬಂದರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾರವಾರ ಕ್ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.