ಹತ್ರಸ್ ಘಟನೆಯ ಪ್ರಮುಖ ಆರೋಪಿ-ಸಂತ್ರಸ್ತೆ ಕುಟುಂಬ ಸದಸ್ಯನ ಮಧ್ಯೆ ನಿಯಮಿತ ಫೋನ್ ಸಂಪರ್ಕವಿತ್ತೇ?

0

ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯು ಮೃತ ಸಂತ್ರಸ್ತೆಯ ಕುಟುಂಬದ ಕನಿಷ್ಠ ಒಬ್ಬ ಸದಸ್ಯನ ಜತೆ ನಿಯಮಿತ ಸಂಪರ್ಕದಲ್ಲಿದ್ದನೆಂದು ಘಟನೆಯ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಕರೆ ಮಾಹಿತಿ ದಾಖಲೆಗಳನ್ನು ಉಲ್ಲೇಖಿಸಿರುವ ಕೆಲ ಪೊಲೀಸ್ ಮೂಲಗಳ ಪ್ರಕಾರ ಐದು ತಿಂಗಳು ಅವಧಿಯಲ್ಲಿ ಪ್ರಮುಖ ಆರೋಪಿ ಹಾಗೂ ಸಂತ್ರಸ್ತೆಯ ಸೋದರನ ಹೆಸರಿನಲ್ಲಿ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯ ನಡುವೆ ಕನಿಷ್ಠ 100 ಕರೆಗಳು ಹೋಗಿವೆ ಎಂದು ಹೇಳಿವೆ.

ಈ ಎರಡು ದೂರವಾಣಿ ಸಂಖ್ಯೆಗಳ ನಡುವೆ ಅಕ್ಟೋಬರ್ 2019 ಹಾಗೂ ಮಾರ್ಚ್ 2020ರ ನಡುವೆ ಐದು ಗಂಟೆಗಳಿಗೂ ಹೆಚ್ಚು ಸಮಯ ಸಂಭಾಷಣೆ ನಡೆದಿವೆ, ಈ ಕುರಿತಂತೆ ಸಂತ್ರಸ್ತೆಯ ಸೋದರನನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ಈ ಹಿಂದೆ ಸಂತ್ರಸ್ತೆ ಕುಟುಂಬ ಜತೆ ಸಂಪರ್ಕ ಹೊಂದಿದ್ದರೆಂದು ಕೆಲ ಗ್ರಾಮಸ್ಥರು ಹೇಳಿದ್ದಾರೆಂದೂ ಪೊಲೀಸ್ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here