ಹರಿಹರ ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯಿಂದ ಬೆಳ್ಳೊಡಿಯಿಂದ ರಾಮಥೀರ್ತ ಬಾನುವಳ್ಳಿ ಸೇರಿದಂತೆ ಇತರೆ ಗ್ರಾಮಗಳ ಸಮೀಪ ಕೆಲ ರಸ್ತೆಗಳ ಸಂಪರ್ಕ ಕಡಿತವಾಗಿದ್ದು, ಜತೆಗೆ ನೂರಾರು ವಿಳೆದ ಎಲೆ ತೊಟ ಮತ್ತು ಅಡಿಕೆಯ ತೊಟ  ಹೆಕ್ಟೇರ್ ಜಮೀನುಗಳಲ್ಲಿ ನೀರು ಸಂಗ್ರಹವಾಗಿ ಬೆಳೆ ಹಾನಿಯಾಗಿದೆ.

0

ಹರಿಹರ ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯಿಂದ ಬೆಳ್ಳೊಡಿಯಿಂದ ರಾಮಥೀರ್ತ ಬಾನುವಳ್ಳಿ ಸೇರಿದಂತೆ ಇತರೆ ಗ್ರಾಮಗಳ ಸಮೀಪ ಕೆಲ ರಸ್ತೆಗಳ ಸಂಪರ್ಕ ಕಡಿತವಾಗಿದ್ದು, ಜತೆಗೆ ನೂರಾರು ವಿಳೆದ ಎಲೆ ತೊಟ ಮತ್ತು ಅಡಿಕೆಯ ತೊಟ  ಹೆಕ್ಟೇರ್ ಜಮೀನುಗಳಲ್ಲಿ ನೀರು ಸಂಗ್ರಹವಾಗಿ ಬೆಳೆ ಹಾನಿಯಾಗಿದೆ.

ತಾಲ್ಲೂಕಿನಲ್ಲಿ ಸುರಿದ ಮಳೆಗೆ ಸೊಳ್ಳೆಕೇರೆ ಹಳ್ಳ ಪೂರ್ಣವಾಗಿ ಹರಿಯುತ್ತಿರುವ ಪರಿಣಾಮ ಗ್ರಾಮದ ಸಮೀಪದ ಸೇತುವೆ ಮೇಲೆ ನೀರು ಹರಿದು ರಸ್ತೆ ಸಂಪರ್ಕ ಕಡಿತವಾಗಿದ್ದು, ರೈತರು ಜಮೀನುಗಳಿಗೆ ತೆರಳಿ ಕೃಷಿ ಚಟುವಟಿಕೆ ನಡೆಸಲು ಕಷ್ಟವಾಗಿದೆ.ನಂತರ ಮಾತನಾಡಿದ ರೈತ ಬಸುವರಾಜ ಬೆಳ್ಳೊಡಿ ಮಾತನಾಡಿ ಬಹುತೇಕ ರೈತರ ಜಮೀನುಗಳು ಜಲಾವೃತವಾಗಿದೆ. ಬೆಳ್ಳೊಡಿ ರಾಮತೀರ್ಥ ಮಾರ್ಗದಲ್ಲಿರುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ನೂರಾರು ಹೆಕ್ಟೇರ್ ಜಮೀನಿದ್ದು, ಕೃಷಿ ಚಟುವಟಿಕೆ ಹಾಗೂ ಕೂಲಿ ಕೆಲಸಗಳಿಗೆ ಹೋಗಲು ಗ್ರಾಮದ ಜನತೆ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಈ ಸೇತುವೆ ಮುಳುಗಿರುವುದರಿಂದ ರೈತರು ತಮ್ಮ ಕೃಷಿ ಚಟುವಟಿಕೆ ನಡೆಸಲು ಸುಮಾರು 10 ಕಿ.ಮೀ. ಸುತ್ತುವರೆದು ಜಮೀನುಗಳಿಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ ಎಂದರು.

ಈ ಸ್ಥಳದಲ್ಲಿ ಎತ್ತರ ಮಟ್ಟದ ನೂತನ ಸೇತುವೆ ನಿರ್ಮಿಸುವ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ತೆರಳಲು ಶಾಶ್ವತ ಪರಿಹಾರ ಮಾಡಬೇಕೆಂದು ಒತ್ತಾಯಿಸಿದರು.

ನಂತರ ರೈತ ಹನುಮಂತಪ್ಪ ಮಾತನಾಡಿ ಕಳೆದ ಬಾರಿ ಜಲಾವೃತವಾಗಿ ಅಧಿಕಾರಿಗಳು ಸಮಿಕ್ಷೆ ಮಾಡಿ ಹೊಗಿದ್ದು ಇಲಿಯವರೆಗೂ ಪರಿಹಾರ ಧನ ಸಿಗಲ್ಲಿಲ ಕೇಳಿದರೆ ಸರಕಾರಕ್ಕೆ ಕಳಿಸಿದೇವೆ ಇನ್ನು ಬಂದಿಲ್ಲ ಎಂದು ಹಾರಕೆಯ ಉತ್ತರ ನೀಡುತ್ತಿದ್ದಾರೆ ಈವರ್ಷ ಬೆಳೆದ ಬೆಳೆಯನ್ನು ಸಂಪೂರ್ಣ ನಾಶವಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದರು.

ವ್ಯಾಪ್ತಿಯಲ್ಲಿ ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತೊಟಗಾರಿಕೆ ಇಲಾಖೆಯ ಅಧಿಕಾರಿ ರೇಖಾ ಮಾತನಾಡಿ, ಕಳೆದ ವರ್ಷದಲ್ಲಿ ಸೇತವೆ ಕುಸಿದಿತು ಸಂಚಾರ ಬಂದು ಮಾಡಲಾಗಿತು ಈಗ ರಸ್ತೆ ಸರಿಯಾಗಿದ್ದು ತಾಲ್ಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಸುಮಾರು ಎಲೆ ಬಳ್ಳಿ ತೊಟಗಳು ಹಾಳಾಗಿವೆ ನಾವುಗಳು ಪರೀಶಿಲನೆ ಮಾಡಿ ಸರ್ಕಾರಕೆ ವರದಿ ಸಲ್ಲಿಸಿಲಾಗುವುದು ಎಂದು ಹೇಳಿದರು.

ಭರ್ತಿಯಾದ ಹಳ್ಳ ನೊಡುವುದಕ್ಕೆ ನೂರಾರು ಜನರು ಸೇರಿದಂತೆ ಮಹಿಳೆಯರು ನೊಡಲು ಅಗಮಿಸಿದ್ದು ವಿಶೇಷವಾಗಿತ್ತು ಮತ್ತು ಪೊಲೀಸ್ ಇಲಾಖೆಯ ಜನರು ಒಡಾಡು ಬಾರದು ಎಂದು ಬ್ಯಾರಿಕೇಟ್ ಹಾಕಿ ಬಂದೋಬಸ್ತ್ ಮಾಡಿದ್ದರು ಈ ವೇಳೆಯಲ್ಲಿ  ಎ ಎಸ್ ಐ ರಸೋಲ್ ಸಾಬ್ ಸೇರಿದಂತೆ ಸಿಬ್ಬಂದಿಗಳು ತೊಟಗಾರಿಕೆ ಇಲಾಖೆಯ ಸಿಇಬ್ಬಂದಿಗಳು ಇದ್ದರು

LEAVE A REPLY

Please enter your comment!
Please enter your name here