ಮನವಿ
ಹಳೆ ವೀರಾಪುರದಿಂದ ಡುಮ್ಮಗೆರೆಗೆ ಇರುವ ರಸ್ತೆಗೆ 2 ಕಡೆ ಸಣ್ಣ ಚೆಕ್ ಡ್ಯಾಮ್ ಗಳನ್ನು ನಿರ್ಮಿಸಿಕೊಡಿ : ಸಣ್ಣ ನೀರಾವರಿ ಇಲಾಖೆಗೆ ಪತ್ರಕರ್ತ ಬಸವರಾಜು ಮನವಿ
ಸ್ಥಳ: ಹಳೇ ವೀರಾಪುರ.
ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಮಲಪ್ರಭಾ ನದಿ ದಂಡೆಯಲ್ಲಿರುವ ಹಳೇ ವೀರಾಪುರ ಗ್ರಾಮದಿಂದ ಡುಮ್ಮಗೆರೆಗೆ ನಿರ್ಮಾಣ ಮಾಡಿರುವ ಮಣ್ಣಿನ ರಸ್ತೆಗೆ ಸಿಮೆಂಟ್ ಕಾಂಕ್ರೀಟ್ ಸಿ.ಡಿ ಗಳು ಇಲ್ಲದೇ ಇರುವ ಕಾರಣ ಅಕ್ಕ ಪಕ್ಕದ ಹೊಲಗಳಲ್ಲಿ ಹರಿದು ಬರುವ ನೀರು ಕಬ್ಬು ಮತ್ತು ಇನ್ನಿತರೇ ಬೆಳೆದ ಬೆಳೆಗಳಲ್ಲಿ ನಿಂತು ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ವೀರಾಪುರ ಗ್ರಾಮದ 3 ಕೆರೆಗಳು ಭರ್ತಿಯಾಗಿದ್ದು ಹರಿದು ಬರುವ ನೀರು ಹೊಲಗಳಲ್ಲಿ ನಿಂತು ಸುಮಾರು 30 ಎಕರೆ ಹೊಲಗಳು ಜಲಾವೃತವಾಗಿವೆ. ಇಂದರಿಂದ ರೈತರಿಗೆ ಬಾರಿ ತೊಂದರೆಯಾಗಿದೆ. ಆದ್ದರಿಂದ ರೈತರ ಮನವಿ ಮೇರೆಗೆ ನಿನ್ನೆ ನಾನು ಆ ಸ್ಥಳಗಳಿಗೆ ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಸಣ್ಣ ನೀರಾವರಿ ಇಲಾಖೆ ಹಾಗೂ ಗುತ್ತಿಗೆದಾರರ ಗಮನಕ್ಕೆ ತೆಗೆದುಕೊಂಡು ಬಂದರು. ಆದ್ದರಿಂದ ಇನ್ನಾದರೂ ಈ ರಸ್ತೆಗೆ 2 ರಿಂದ 3 cd ಗಳನ್ನು ನಿರ್ಮಾಣ ಮಾಡಿ ನಮ್ಮ ವೀರಾಪುರ ರೈತರಿಗೆ ಸಣ್ಣ ನೀರಾವರಿ ಇಲಾಖೆ ಅಭಿಯಂತರರು ಅನುಕೂಲ ಮಾಡಿಕೊಡುವವರೇ ಎಂಬುದನ್ನು ಕಾದು ನೋಡಬೇಕಿದೆ. 🖋️🙏 ವಂದನೆಗಳು. ಶ್ರೀ ಬಸವರಾಜು. ಪತ್ರಕರ್ತರು. ಹಾಗೂ ಹೋರಾಟಗಾರರು. ವೀರಾಪುರ.