ಹಳೇಯ ಶಾಲಾ ಕಟ್ಟಡದ ಗೋಡೆ ಕುಸಿತ

0

ಹಳೇಯ ಶಾಲಾ ಕಟ್ಟಡದ ಗೋಡೆ ಕುಸಿತ

ಧಾರವಾಡ:—1929 ರಲ್ಲಿ ನಿಮಿ೯ಸಿದ ನಗರದ ಪಂಚ ಕಚೇರಿ ಓಣಿಯ ಸೆಂಟ್ರಲ್ ಸ್ಕೂಲ್ ಇತ್ತೀಚೆಗೆ ಸುರಿದ ಮಳೆಯಿಂದ ಇಂದು ಬೆಳಿಗ್ಗೆ ಶಾಲೆಯ ಗೂಡೆ ಕುಸಿದು ಹಾನಿ ಸಂಭವಿಸಿದೆ.

ಅದರಲ್ಲಿಯೂ ಮಹಾಮಾರಿ ಕರೋನಾ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದು ಇದರಿಂದ ಕರೋನಾ ಈಗ ನೂರಾರು ಮಕ್ಕಳಿಗೆ ಜೀವದಾನ ನೀಡಿತು ಎಂದರೆ ತಪ್ಪಾಗಲಾರದು. ಶಾಲೆ ನಡೆದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದರೆ ಭಾರಿ ಅನಾಹುತಕ್ಕೆ‌ ಕಾರಣವಾಗುತ್ತಿತ್ತು.

ಗಾಂಧಿಚೌಕ ಸಕ೯ಲ್ ನಿಂದ ಹೂಸಯಸ್ಲಾಪೂರ ಹೋಗುವ ರಸ್ತೆಗೆ ಹೊಂದಿಕೊಡಿರುವ ಈ ಸೆಂಟ್ರಲ್ ಸ್ಕೂಲ್ ನಂ 1 ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಖಾಜಿ ಘಟನಾ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here