ಹಿಂದೂ ಧರ್ಮದ ದೇವರ ಬಗ್ಗೆ ಅವಹೇಳನಕಾರಿ ಹೇಳಿಕ ಖಂಡಿಸಿ ಬಿಜೆಪಿ ಶಾಸಕ ಮುರಗೇಶ ನಿರಾಣಿ ರಾಜೀನಾಮೆಗೆ ಆಗ್ರಹಿಸಿ ಕ್ಷತ್ರಿಯ ಸಮಾಜದಿಂದ ಮನವಿ
ಅಥಣಿ ವರದಿ
ಹಿಂದೂ ಧರ್ಮದ ದೇವರುಗಳನ್ನು ಅವಹೇಳನಕಾರಿ ಹೇಳಿಕೆ ಖಂಡಿಸಿ ಇವತ್ತು ಕ್ಷತ್ರಿಯ ಸಮಾಜದಿಂದ ಬೀಳಗಿ ಬಿಜೆಪಿ ಶಾಸಕ ಮುರಗೇಶ ನಿರಾಣಿ ರಾಜೀನಾಮೆಗೆ ಒತ್ತಾಯಿಸಿ ಅಥಣಿ ತಹಶಿಲ್ದಾರ ಮೂಲಕ ಮುಖ್ಯಮಂತ್ತಿಯವರಿಗೆ ಮನವಿ ಸಲ್ಲಿಸಿದರು
ಬಿಜೆಪಿ ಶಾಸಕ ಮುರಗೇಶ ನಿರಾಣಿ ತಮ್ಮ ವಾಟ್ಸಾಪ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮದ ದೇವರಾದ ರಾಮ,ಕೃಷ್ಣ,ಶಿವ,ವಿಷ್ಣು,ಸೂರ್ಯದೇವ,ಯಮ,ಇಂದ್ರ ಹೀಗೆ ಅನೇಕ ದೇವತೆಗಳ ಬಗ್ಗೆ ಅವಹೇಳನವಾಗಿ ಹರಿಬಿಟ್ಟಿದ್ದು ಇದು ಹಿಂದೂ ಧರ್ಮಕ್ಕೆ ಮಾಡಿದ ಅಪಮಾನವಾಗಿದೆ ಎಂದು ಹಿಂದೂ ಮುಖಂಡರು ಅವರ ರಾಜೀನಾಮೆಗೆ ಆಗ್ರಹ ಪಡಿಸಿದ್ದಾರೆ.
ಈ ವೇಳೆ ಮಾತನಾಡಿದ ಮುಖಂಡ ರಾಜಕುಮಾರ ಜಂಬಗಿ ಮಾತನಾಡಿ ಹಿಂದೂ ದೇವಾನುದೇವತೆಗಳ ಬಗ್ಗೆ ಅವಹೇಳನವಾಗಿ ತಮ್ಮ ವಾಟ್ಸಾಪನಲ್ಲಿ ಹರಿಬಿಟ್ಟಿದ್ದು ಇದು ಹಿಂದೂ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ ಕೂಡಲೇ ಬಿಜೆಪಿಯ ಮಾಜಿ ಸಚಿವರು ಹಾಲಿ ಶಾಸಕರಾದ ಮುರಗೇಶ ನಿರಾಣಿಯವರು ರಾಜೀನಾಮಗೆ ನೀಡಬೇಕು ಮತ್ತು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಮತ್ತು ಅವರು ನಮ್ಮ ರಾಜ್ಯದಲ್ಲಿ ಇರುವದಕ್ಕೆ ಯೋಗ್ಯರಲ್ಲ ಎಂದು ಹೇಳಿದರು
ಈ ವೇಳೆ ಕ್ಷತ್ರಿಯ ಮರಾಠಾ ಸಮಾಜದ ಮುಖಂಡ ಅನೀಲ ಮೋರೆ,ಸಂಜು ನಾಯಿಕ,ಸಂಜಯ ಶಂಕರ ನಾಯಕ,ಚಂದು ದೇಸಾಯಿ, ನಾಗಪ್ಪ ನಾಯಿಕ,ಬಸವರಾಜ ನಾಯಕ, ಇದ್ದರು
ವರದಿ:ಡಾ.ಆರ್ ಎಸ್ ದೊಡ್ಡನಿಂಗಪ್ಪಗೋಳ ಅಥಣಿ